ಬದಿಯಡ್ಕ: ಬೇ:ಳ ಕೌಮುದಿ ಗ್ರಾಮೀಣ ನೇತ್ರಾಲಯ ಮತ್ತು ಅಚ್ಚಿವ್ ಟ್ರಸ್ಟ್ ನಡೆಸುವ ಉಚಿತ ಕಣ್ಣು ತಪಾಸಣೆ ಮತ್ತು ಪೊರೆ ನಿರ್ಣಯ ಶಿಬಿರ ಜೂನ್ 11 ಭಾನುವಾರ ಬೆಳಗ್ಗೆ 9 ರಿಂದ ಮಧ್ಯಾಹ್ನ 12.30ರ ತನಕ ಬೇಳ ಕುಮಾರಮಂಗಲ ಕೌಮುದಿ ಗ್ರಾಮೀಣ ನೇತ್ರಾಲಯದಲ್ಲಿ ನಡೆಯಲಿದೆ. ನೇತ್ರ ತಜ್ಞರಾದ ಡಾ. ರಾಕೇಶ್, ಡಾ. ವಿನಯಾ ರೋಗಿಗಳ ತಪಾಸಣೆ ನಡೆಸಿ ಸಲಹೆಯನ್ನು ನೀಡುವರು. ಸಾರ್ವಜನಿಕರು ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ಸಂಘಟಕರು ತಿಳಿಸಿರುತ್ತಾರೆ.