ತಿರುವನಂತಪುರ: ಎಐ ಕ್ಯಾಮೆರಾಗಳು ಮಕ್ಕಳ ವಯಸ್ಸನ್ನು ಪತ್ತೆ ಮಾಡುವ ಸಾಮಥ್ರ್ಯ ಹೊಂದಿದೆ ಎಂದು ಸಾರಿಗೆ ಸಚಿವ ಆಂಟನಿ ರಾಜು ಹೇಳಿದ್ದಾರೆ. ಎ.ಐ. ಕ್ಯಾಮರಾ 12 ವರ್ಷದೊಳಗಿನ ಮಕ್ಕಳನ್ನು ಗುರುತಿಸುತ್ತದೆ ಎಂದವರು ಸ್ಪಷ್ಟಪಡಿಸಿರುವರು. ಅದಕ್ಕಾಗಿ ವಿಶೇಷ ವ್ಯವಸ್ಥೆ ಸಿದ್ಧಪಡಿಸಲಾಗಿದೆ ಎಂದು ಸಚಿವರು ತಿಳಿಸಿದರು.
ದ್ವಿಚಕ್ರ ವಾಹನಗಳಲ್ಲಿ ಮೂವರಲ್ಲಿ ಓರ್ವ/ರ್ವೆ 12 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರೆ ದಂಡ ವಿಧಿಸದಿರಲು ಎಂ.ವಿ.ಡಿ ನಿರ್ಧರಿಸಿದೆ. ಆದರೆ ಹನ್ನೆರಡು ವರ್ಷದೊಳಗಿನ ಮಕ್ಕಳನ್ನು ಗುರುತಿಸುವುದು ಹೇಗೆ ಎಂಬ ಅನುಮಾನಗಳಿದ್ದವು.
ಏತನ್ಮಧ್ಯೆ, ಎ.ಐ. ಕ್ಯಾಮೆರಾದಿಂದ ಪತ್ತೆಯಾದ ಉಲ್ಲಂಘನೆಗಳಿಗೆ ಜೂನ್ 5 ರಿಂದ ದಂಡವನ್ನು ವಿಧಿಸಲಾಗುತ್ತದೆ. ರಾಜ್ಯಾದ್ಯಂತ 726 ಎಐ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಅಕ್ರಮ ಪಾರ್ಕಿಂಗ್‍ಗೆ ಕನಿಷ್ಠ ದಂಡ ವಿಧಿಸಲಾಗುತ್ತದೆ. 250 ರೂ. ವಿಧಿಸಲಾಗುತ್ತದೆ. ಪ್ರತಿ ಬಾರಿ ಉಲ್ಲಂಘನೆಗಳು ಕ್ಯಾಮರಾದಲ್ಲಿ ಸೆರೆಯಾದಾಗ ದಂಡವನ್ನು ಪುನರಾವರ್ತನೆಯಾಗಲಿದೆ.