ನವದೆಹಲಿ: ಮಕ್ಕಳ ರಕ್ಷಣೆ ಸಂಬಂಧ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಪರಿಗಣಿಸಿ ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರಸ್ ಅವರು ಮಕ್ಕಳ ಮೇಲಿನ ಶಸ್ತ್ರಾಸ್ತ್ರ ಸಂಘರ್ಷಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಿರುವ ವಾರ್ಷಿಕ ವರದಿಯಿಂದ ಭಾರತವನ್ನು ಕೈಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ.
ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರಸ್ ಅವರು ಸಶಸ್ತ್ರ ಗುಂಪುಗಳು ಹುಡುಗರ ನೇಮಕಾತಿ ಮತ್ತು ಬಳಕೆ ಮತ್ತು ಭದ್ರತಾ ಪಡೆಗಳಿಂದ ಬಂಧನ, ಹತ್ಯೆ ಮತ್ತು ಅಂಗವಿಕಲತೆಗೆ ಸಂಬಂಧಿಸಿದಂತೆ ಮಕ್ಕಳು ಮತ್ತು ಸಶಸ್ತ್ರ ಸಂಘರ್ಷದ ವರದಿಯಲ್ಲಿ ಉಲ್ಲೇಖಿಸಲಾದ ದೇಶಗಳ ಪಟ್ಟಿಯಿಂದ ಭಾರತವನ್ನು ತೆಗೆದುಹಾಕಿದ್ದಾರೆ. 12 ವರ್ಷಗಳ ನಂತರ ಬುರ್ಕಿನಾ ಫಾಸೊ, ಕ್ಯಾಮರೂನ್, ಲೇಕ್ ಚಾಡ್ ಜಲಾನಯನ ಪ್ರದೇಶ, ನೈಜೀರಿಯಾ, ಪಾಕಿಸ್ತಾನ ಮತ್ತು ಫಿಲಿಪೈನ್ಸ್‌ನಂತಹ ದೇಶಗಳ ಜೊತೆಗೆ 2010 ರ ನಂತರ ವರದಿಯಲ್ಲಿ ಭಾರತದ ಹೆಸರಿಲ್ಲದಿರುವುದು ಇದೇ ಮೊದಲು.
‘ಮಕ್ಕಳು ಮತ್ತು ಸಶಸ್ತ್ರ ಸಂಘರ್ಷ’ ಕುರಿತ ಯುಎನ್ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರಸ್ ಅವರ ವರದಿಯು “ಮಕ್ಕಳನ್ನು ಉತ್ತಮವಾಗಿ ರಕ್ಷಿಸಲು” ಸರ್ಕಾರವು ತೆಗೆದುಕೊಂಡ ಕ್ರಮಗಳ “2023 ರಲ್ಲಿ ವರದಿಯಿಂದ ಭಾರತವನ್ನು ತೆಗೆದುಹಾಕಲಾಗಿದೆ” ಎಂದು ಹೇಳಿದೆ. ಮಕ್ಕಳ ರಕ್ಷಣೆ ಕುರಿತಂತೆ ಭಾರತ ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಕಳೆದ ವರ್ಷದ ವರದಿಯಲ್ಲಿ ಶ್ಲಾಘಿಸಿದ್ದ ಗುಟೆರಸ್, ಈ ಕ್ರಮಗಳು ಆತಂಕದ ಸನ್ನಿವೇಶಗಳಿಂದ ಭಾರತವನ್ನು ಮುಕ್ತವಾಗಿಸಲು ನೆರವಾಗಬಹುದು ಎಂದಿದ್ದಾರೆ.
'ಮಕ್ಕಳ ಉತ್ತಮ ಸುರಕ್ಷತೆಗೆ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಪರಿಗಣಿಸಿ, ಭಾರತವನ್ನು ವಾರ್ಷಿಕ ವರದಿಯಿಂದ ಕೈಬಿಡಲಾಗಿದೆ' ಎಂದು ಗುಟೆರಸ್ ಅವರು ಮಕ್ಕಳು ಮತ್ತು ಶಸ್ತ್ರಾಸ್ತ್ರ ಸಂಘರ್ಷ ಕುರಿತ 2023ರ ವಾರ್ಷಿಕ ವರದಿಯಲ್ಲಿ ಹೇಳಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಮಕ್ಕಳ ರಕ್ಷಣೆಯನ್ನು ಬಲಪಡಿಸುವ ಸಲುವಾಗಿ ಸರ್ಕಾರವು ಕಳೆದ ನವೆಂಬರ್‌ನಲ್ಲಿ ವಿಶ್ವಸಂಸ್ಥೆಯ ಭಾಗವಹಿಸುವಿಕೆಯೊಂದಿಗೆ ಆಯೋಜಿಸಿದ್ದ ಕಾರ್ಯಾಗಾರದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದರು.