HEALTH TIPS

ಲೋಕಸಭೆ ಚುನಾವಣೆ: ಜೂನ್‌ 12ರಂದು ನಿಗದಿಯಾಗಿದ್ದ ಪ್ರತಿಪಕ್ಷಗಳ ಸಭೆ ಮುಂದೂಡಿಕೆ

              ನವದೆಹಲಿ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳ ಒಗ್ಗೂಡುವಿಕೆ ಉದ್ದೇಶದಿಂದ ಜೂನ್‌ 12ರಂದು ಬಿಹಾರದ ಪಟ್ನಾದಲ್ಲಿ ಕರೆದಿದ್ದ ಸಭೆಯನ್ನು ಮುಂದೂಡಲಾಗಿದೆ. ಇದು, ಪ್ರತಿಪಕ್ಷಗಳು ಸ್ವಹಿತಾಸಕ್ತಿ ರಕ್ಷಣೆಗಾಗಿ ಹೆಚ್ಚು ಆದ್ಯತೆ ನೀಡಿವೆ ಎಂಬುದನ್ನು ಬಹಿರಂಗಪಡಿಸಿದೆ.

                   ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖಂಡ ರಾಹುಲ್‌ ಗಾಂಧಿ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ನಿಗದಿತ ದಿನ ಲಭ್ಯವಿರಲಿಲ್ಲ ಎಂದು ಮುಂದೂಡಿಕೆಗೆ ಕಾರಣವನ್ನು ನೀಡಲಾಗಿದೆ.

                ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್ ಈ ಸಭೆಯನ್ನು ಕರೆದಿದ್ದರು. 'ಕೆಲ ಮುಖಂಡರು ಆ ದಿನ ಪೂರ್ವನಿಗದಿತ ಕಾರ್ಯಕ್ರಮ  ಇದ್ದು, ಬೇರೊಂದು ದಿನ ಸಭೆ ಕರೆಯಲು ತಿಳಿಸಿದ್ದರು. ಆದರೆ ನಿತೀಶ್‌ 12ರಂದೇ ಸಭೆ ಕರೆದಿದ್ದರು' ಎಂದು ಮೂಲಗಳು ತಿಳಿಸಿವೆ.

                  ಆದರೆ, ನಿತೀಶ್‌ ಅವರೇ ಸ್ವತಃ ವಿರೋಧಪಕ್ಷಗಳ ಮುಖಂಡರನ್ನು ಭೇಟಿಯಾಗಲು ಮುಂದಾಗಿದ್ದು, ತಮ್ಮನ್ನೇ ಅನಧಿಕೃತವಾಗಿ ಸಂಯೋಜಕ ಎಂಬಂತೆ ಬಿಂಬಿಸಿಕೊಂಡಿದ್ದಕ್ಕೆ ಪ್ರತಿಪಕ್ಷಗಳಲ್ಲಿಯೇ ಅಸಮಾಧಾನ ಇತ್ತು ಎನ್ನಲಾಗಿದೆ. ಚರ್ಚೆಗೆ ಮೊದಲೇ ಮುಂದಿನ ಸಭೆ ಪಟ್ನಾದಲ್ಲಿ ನಡೆಯಲಿದೆ ಎಂದು ಪ್ರಕಟಿಸಿದ್ದರೆ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅನುಮೋದಿಸಿದ್ದರು.

                    ಜೂನ್ 12ರಂದು ರಾಹುಲ್‌ಗಾಂಧಿ ಅವರು ಸಭೆಗೆ ಹಾಜರಾಗಲು ಸಾಧ್ಯವಾಗದು ಎಂದು ಕಾಂಗ್ರೆಸ್ ಪಕ್ಷವು ನಿತೀಶ್ ಅವರಿಗೆ ತಿಳಿಸಿತ್ತು. ಎಂ.ಕೆ.ಸ್ಟಾಲಿನ್ ಮತ್ತು ಸೀತಾರಾಂ ಯೆಚೂರಿ ಅವರೂ ಇಂತಹುದೇ ಸಂದೇಶ ರವಾನಿಸಿದ್ದರು.

                     ಕನಿಮೋಳಿ ಅವರನ್ನು ಸಭೆಗೆ ಕಳುಹಿಸಲಾಗುವುದು ಎಂದು ಸ್ಟಾಲಿನ್ ಅವರು ತಿಳಿಸಿದ್ದರೆ ಕಾಂಗ್ರೆಸ್ ಪಕ್ಷವು, ಖರ್ಗೆ ಅವರು ಸಭೆಗೆ ಬರುವುದಿಲ್ಲ. ಪಕ್ಷದ ಪ್ರಧಾನ ಕಾರ್ಯದರ್ಶಿ ಮತ್ತು ಮುಖ್ಯಮಂತ್ರಿಯೊಬ್ಬರನ್ನು ಕಳುಹಿಸಲಾಗುವುದು ಎಂದು ತಿಳಿಸಿತ್ತು.

                   ಆದರೆ, ವಿರೋಧಪಕ್ಷಗಳ ಒಂದು ವರ್ಗ ಈ ಎಲ್ಲ ಗೊಂದಲಗಳಿಗೆ ಕಾಂಗ್ರೆಸ್‌ ಪಕ್ಷ ಕಾರಣ ಎಂದು ಆರೋಪಿಸಿದೆ. ಕಾಂಗ್ರೆಸ್ ಪಕ್ಷದ ನಾಯಕರು ಯಾರೊಂದಿಗೂ ಚರ್ಚಿಸದೇ ಕೆಲ ಪಕ್ಷಗಳ ಮುಖಂಡರ ಜೊತೆಗೆ ಮಾತನಾಡಲು ನಿತೀಶ್‌ ಅವರಿಗೆ ತಿಳಿಸಿದ್ದರು. ಮಮತಾ ಬ್ಯಾನರ್ಜಿ ಅವರು ಪಟ್ನಾದಲ್ಲಿಯೇ ಸಭೆಯನ್ನು ಕರೆಯಬೇಕು ಎಂದು ನಿತೀಶ್‌ ಅವರಿಗೆ ಸಲಹೆ ಮಾಡಿದ್ದರು.

                  ಏಪ್ರಿಲ್‌ 16ರಂದು ನಿತೀಶ್‌ ಮತ್ತು ಕಾಂಗ್ರೆಸ್‌ ನಾಯಕರ ನಡುವೆ ಮಾತುಕತೆ ನಡೆದಿದ್ದ ಹಿಂದೆಯೇ ಎನ್‌ಸಿಪಿ ನಾಯಕ ಶರದ್‌ ಪವಾರ್ ಅವರು, ಖರ್ಗೆ ಮತ್ತು ರಾಹುಲ್‌ಗಾಂಧಿ ಅವರ ಭೇಟಿಗಾಗಿ ಮುಂಬೈನಿಂದ ಧಾವಿಸಿ ಬಂದಿದ್ದರು. ಈ ಮೂಲಕ ನಿತೀಶ್ ಅವರು ಪ್ರತಿಪಕ್ಷಗಳ ಒಗ್ಗೂಡುವಿಕೆಗೆ ತಮ್ಮನ್ನೇ ಸಂಯೋಜಕ ಎಂದು ಬಿಂಬಿಸಿಕೊಳ್ಳುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಅನುಭವಿ ರಾಜಕಾರಣಿಯಾದ ಶರದ್‌ ಪವಾರ್ ಈ ಮೂಲಕ ನಿತೀಶ್‌ ಅವರಿಗೆ ತಮ್ಮ ಉಪಸ್ಥಿತಿಯನ್ನು ಮನದಟ್ಟುಮಾಡಿಸಿದ್ದರು.

                       ಈ ಮಧ್ಯೆ, ಭವಿಷ್ಯದಲ್ಲಿ ನಡೆಯಬಹುದಾದ ಸಭೆಗಳಿಗೆ ಜೂನ್ 12ರ ಸಭೆಯು ಪೂರ್ವಭಾವಿ ಸಿದ್ಧತಾ ಸಭೆ ಆಗಿತ್ತು ಎಂದು ಕಾಂಗ್ರೆಸ್‌ ಪಕ್ಷ ಸ್ಪಷ್ಟಪಡಿಸಿದೆ. ಸಭೆ ಶಿಮ್ಲಾದಲ್ಲಿ ನಡೆಯಬೇಕು ಎಂದು ಪಕ್ಷ ಬಯಸಿದ್ದು, ತಾತ್ಕಾಲಿಕವಾಗಿ ಜೂನ್‌ 23ರ ದಿನ ನಿಗದಿಯಾಗಿದೆ.

                    ಇತ್ತ ಪ್ರತಿಪಕ್ಷಗಳ ಸಭೆ ಮುಂದೂಡಿದ್ದರೂ, 'ಮೊದಲ ಸಭೆ ಪಟ್ನಾದಲ್ಲೇ ಸೇರಬೇಕು. ಸ್ಥಳ ಬದಲಾದರೆ ತಪ್ಪು ಸಂದೇಶ ರವಾನೆ ಆಗಲಿದೆ ಹಾಗೂ ನಿತೀಶ್‌ ಕುಮಾರ್ ಅವರಿಗೂ ಅಪಮಾನ ಆಗಲಿದೆ ಎಂದು ನಿರ್ಧರಿಸಲಾಗಿದೆ' ಎಂದು ಮೂಲಗಳು ತಿಳಿಸಿವೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries