HEALTH TIPS

ವೃತ್ತಿಪರ ಶಿಕ್ಷಣದೊಂದಿಗೆ ಬದುಕು ಕಟ್ಟಿಕೊಂಡ ಕೊರಗ ಸಮುದಾಯದ ಬಾಲೆಯರು: ಜಿಲ್ಲೆಯ ವಿವಿಧ ಕೊರಗ ಕಾಲನಿಗಳಿಂದ 13 ಮಂದಿಗೆ ಆಕಾಶ

                        ಕಾಸರಗೋಡು: ಜಿಲ್ಲೆಯ ಅತ್ಯಂತ ಹಿಂದುಳಿದ ಹಾಗೂ ನಿಕೃಷ್ಟ ವಿಭಾಗ ಎಂದೇ ಪರಿಗಣಿಸಲ್ಪಟ್ಟಿರುವ ಪರಿಶಿಷ್ಟ ವರ್ಗ ಕೊರಗ ಸಮುದಾಯದ ಶಿಕ್ಷಣದೊಂದಿಗೆ ಹೊಸ ಬದುಕು ಕಟ್ಟಿಕೊಳ್ಳುವಲ್ಲಿ ಮುಂಚೂಣಿಯಲ್ಲಿದ್ದಾರೆ. ಜಿಲ್ಲೆಯ ವಿವಿಧ ಕೊರಗ ಕಾಲೋನಿಯ 13 ಮಂದಿ ಉತ್ತಮ ಶಿಕ್ಷಣದೊಂದಿಗೆ ಹೊಸ ಜೀವನ ಕಂಡುಕೊಲ್ಳಲಾರಂಭಿಸಿದ್ದಾರೆ.

                 ಅವನತಿಯ ಅಂಚಿನಲ್ಲಿರುವ ಕೊರಗ ಸಮುದಾಯವನ್ನು ಸಮಾಜದ ಮುಖ್ಯವಾಹಿನಿಗೆ ತರಲು ಜಿಲ್ಲಾ ಪಂಚಾಯಿತಿಯು ವೃತ್ತಿಪರ ಕೌಶಲ್ಯ ತರಬೇತಿ ವಾರ್ಷಿಕ ಯೋಜನೆಯಲ್ಲಿ ಸೇರಿಸಿದ್ದು, ಜಿಲ್ಲೆಯ ಪರಿಶಿಷ್ಟ ಜಾತಿ ಅಭಿವೃದ್ಧಿ ಇಲಾಖೆಯಿಂದ ಅನುಷ್ಠಾನಗೊಳಿಸಲಾಗುತ್ತಿದೆ. ಯೋಜನೆಯನ್ವಯ ಒಂದು ಕುಟುಂಬದಲ್ಲಿ ಕನಿಷ್ಠ ಒಬ್ಬ ವ್ಯಕ್ತಿಗೆ ಉದ್ಯೋಗವನ್ನು ಖಾತ್ರಿಪಡಿಸುವುದು ಯೋಜನೆಯ ಗುರಿಯಾಗಿದೆ. ಕಳೆದ ಐದು ತಿಂಗಳಿಂದ ಕೊರಗ ವಿಭಾಗದಿಂದ ಆಯ್ಕೆಯಾದ 13 ಮಂದಿ ಹಾಗೂ ಎಸ್ಸೆಸೆಲ್ಸಿ  ಶಿಕ್ಷಣ ಪೂರೈಸಿರುವ 18 ರಿಂದ 24 ವರ್ಷದೊಳಗಿನ ಯುವಕ-ಯುವತಿಯರು ಸಿಎನ್‍ಸಿ ಆಪರೇಟರ್ ವರ್ಟಿಕಲ್ ಮೆಷಿನಿಂಗ್ ಸೆಂಟರ್ ಕೋರ್ಸ್ ನಲ್ಲಿ ತರಬೇತಿ ಪಡೆದಿದ್ದಾರೆ. ಕೋರ್ಸ್‍ಯಶಸ್ವಿಯಾಗಿ ಪೂರ್ಣಗೊಳಿಸಿದ ಎಲ್ಲಾ 13 ಮಂದಿ ವಿವಿಧ ಕೈಗಾರಿಕಾ ಸಂಸ್ಥೆಗಳಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದು, ಜೂ.12ರಂದು ಕೆಲಸಕ್ಕೆ ಸೇರ್ಪಡೆಗೊಳ್ಳಲಿದ್ದಾರೆ. ಇವರು ಬೆಂಗಳೂರು ಮತ್ತು ಕೊಯಮತ್ತೂರಿನ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸಲಿದ್ದಾರೆ.   

                              ಇಲಾಖೆಯಿಂದ ಸಹಕಾರ:

                ಪ್ರತಿ ಅಭ್ಯರ್ಥಿಗೆ ಸಂಸ್ಥೆಯಿಂದ ವೇತನ ಲಭಿಸುವಲ್ಲಿ ವರೆಗೆ ಅವರ ವೆಚ್ಚಕ್ಕಾಗಿ ಪರಿಶಿಷ್ಟ ವರ್ಗ ಅಭಿವೃದ್ಧಿ ಇಲಾಖೆಯು ಇವರಿಗೆ ನಿಗದಿತ ಮೊತ್ತವನ್ನು ನೀಡಲಿದೆ. ತಲಶ್ಶೇರಿ ಎನ್‍ಟಿಟಿಎಫ್ ಕ್ಯಾಂಪಸ್‍ನಲ್ಲಿ ಇವರಿಗೆ ತರಬೇತಿ ನೀಡಲಾಗಿದೆ. ತಾಂತ್ರಿಕ ತರಬೇತಿಯೊಂದಿಗೆ, ಪರಿಣಾಮಕಾರಿ ಸಂವಹನ, ಇಂಗ್ಲಿಷ್‍ನಲ್ಲಿ ಸಂವಹನ, ಸಹಯೋಗ, ಸಮಯ ನಿರ್ವಹಣೆ, ಉದ್ಯೋಗದಾತರು ಮತ್ತು ಉದ್ಯೋಗಿಗಳೊಂದಿಗೆ ಹೇಗೆ ಸಂವಹನ ನಡೆಸುವುದು ಮುಂತಾದ ಮೃದು ಕೌಶಲ್ಯಗಳನ್ನು ನೀಡಲಾಯಿತು. ತರಬೇತಿಯ ಸಮಯವು ದಿನಕ್ಕೆ 8 ಗಂಟೆಯಾಗಿದ್ದು, ಗುಣಮಟ್ಟದ ಕಾರ್ಯಾಗಾರದ ಸೌಲಭ್ಯವನ್ನೂ ಒದಗಿಸಲಾಗಿದೆ.  

                             ವಿನಾಶದ ಅಂಚಿನಲ್ಲಿ ಸಮುದಾಯ:

                  ಜಿಲ್ಲೆಯ 11 ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಕೊರಗ ಸಮುದಾಯದ 585 ಕುಟುಂಬಗಳಿದ್ದು, ಇಲ್ಲಿ 1503 ಮಂದಿ ಸದಸ್ಯರಿದ್ದಾರೆ. ಕಾಸರಗೋಡು ಜಿಲ್ಲೆಯಲ್ಲಿ ಮಾತ್ರ ಕೊರಗ ಸಮುದಾಯದವರಿದ್ದು, ಕುಲಕಸುಬು ಬುಟ್ಟಿಹೆಣೆಯುವ ಕಾಯಕ ನಡೆಸುತ್ತಿದ್ದಾರೆ. ಮರಬಳ್ಳಿ ಮತ್ತು ಬಿದಿರುಗಳಿಂದ ಬುಟ್ಟಿ ಹೆಣೆಯುವ ಮೂಲಕ ತಮ್ಮ ಜೀವನೋಪಾಯ ಕಂಡುಕೊಂಡಿದ್ದರೂ, ಇಂದಿನ ತಲೆಮಾರಿನ ಕೆಲವರು ಕೂಲಿಕೆಲಸಕ್ಕೆ ತೆರಳುತ್ತಿದ್ದಾರೆ.   



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries