ನವದೆಹಲಿ: ಮೇ ತಿಂಗಳಲ್ಲಿ ಒಟ್ಟು 1,57,090 ಕೋಟಿ ರೂ. ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಸಂಗ್ರಹಿಸಲಾಗಿದ್ದು ಕಳೆದ ವರ್ಷದ ಇದೇ ಮಾಸಿಕಕ್ಕಿಂತ ಶೇ.12ರಷ್ಟು ಹೆಚ್ಚಳ ವಾಗಿದೆ. ಕಳೆದ ಸತತ 14 ತಿಂಗಳಿಂದ 1.4 ಲಕ್ಷ ಕೋಟಿ ರೂ.ಗೂ ಹೆಚ್ಚಿನ ಜಿಎಸ್ಟಿ ಸಂಗ್ರಹವಾಗುತ್ತಿರುವುದು ವಿಶೇಷವಾಗಿದೆ.

ಸಂಗ್ರಹವಾದ ಒಟ್ಟು 1,57,090 ಕೋಟಿ ರೂಪಾಯಿಯಲ್ಲಿ ಕೇಂದ್ರ ಜಿಎಸ್ಟಿ (ಸಿಜಿಎಸ್ಟಿ) 28,411 ಕೋಟಿ ರೂ., ರಾಜ್ಯಗಳ ಜಿಎಸ್ಟಿ (ಎಸ್ಜಿಎಸ್ಟಿ) 35,828 ಕೋಟಿ ರೂ. ಹಾಗೂ ಸಮಗ್ರ ಜಿಎಸ್ಟಿ (ಐಜಿಎಸ್ಟಿ) 81,363 ಕೋಟಿ ರೂ. ಆಗಿದೆ. ಐಜಿಎಸ್ಟಿಯ ಮೊತ್ತದಲ್ಲಿ ಸರಕುಗಳ ಆಮದಿನ ಮೇಲಿನ 41,772 ಕೋಟಿ ರೂ. ತೆರಿಗೆ ಒಳಗೊಂಡಿದೆ. ಸರಕುಗಳ ಆಮದಿನ ಮೇಲಿನ 1,057 ಕೋಟಿ ರೂಪಾಯಿ ಸಹಿತ 11,489 ಕೋಟಿ ರೂಪಾಯಿ ಸೆಸ್ ಮೇ ಮಾಸದಲ್ಲಿ ಸಂಗ್ರಹವಾಗಿದೆ. ಕೇಂದ್ರ ಸರ್ಕಾರ ಸಿಜಿಎಸ್ಟಿಗೆ 35,369 ಕೋಟಿ ರೂಪಾಯಿ ಇತ್ಯರ್ಥಪಡಿಸಿದೆ ಹಾಗೂ ಐಜಿಎಸ್ಟಿಯಿಂದ ಎಸ್ಜಿಎಸ್ಟಿಗೆ 29,769 ಕೋಟಿ ರೂ. ನೀಡಿದೆ. ನಿಯಮಿತ ಪಾವತಿಗಳ ನಂತರ 2023 ಮೇ ತಿಂಗಳಲ್ಲಿ ಕೇಂದ್ರ ಮತ್ತು ರಾಜ್ಯಗಳ ಒಟ್ಟು ಆದಾಯ ಸಿಜಿಎಸ್ಟಿ ಬಾಬ್ತು 63,780 ಕೋಟಿ ರೂ. ಹಾಗೂ ಎಸ್ಜಿಎಸ್ಟಿ ಬಾಬ್ತು 65,597 ಕೋಟಿ ರೂ. ಆಗಿದೆ.