ಗುಜರಾತ್: ಬಿಹಾರದಲ್ಲಿ ಗಂಗಾ ನದಿಗೆ ಅಡ್ಡಲಾಗಿ ಕಟ್ಟಿದ್ದ ಸೇತುವೆ ಕುಸಿದ ಬೆನ್ನಲ್ಲೇ ಗುಜರಾತ್‌ನಲ್ಲಿ ಸೇತುವೆಯೊಂದು ಬುಧವಾರ ಕುಸಿದು ಬಿದ್ದಿದೆ. ಮಿಂಧೋಲಾ ನದಿಗೆ ಅಡ್ಡಲಾಗಿ ಕಟ್ಟಿದ್ದ ಈ ಸೇತುವೆ ತಾಪಿ ಜಿಲ್ಲೆಯ ಮೈಪುರ್ ಮತ್ತು ದೇಗಾಮಾ ಗ್ರಾಮಗಳನ್ನು ಸಂಪರ್ಕಿಸುವ ಮಾರ್ಗವಾಗಿದೆ.

ಸೇತುವೆ ಕುಸಿತದಿಂದ ಸುಮಾರು 15 ಗ್ರಾಮಗಳಿಗೆ ಅಪಾಯ ಎದುರಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
'ಸೇತುವೆ ನಿರ್ಮಾಣ ಕೆಲಸ 2021ರಲ್ಲಿ ಪ್ರಾರಂಭವಾಗಿದ್ದು, ಸುಮಾರು ₹2 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಿಸಲಾಗಿದೆ. ಕೇವಲ ಎರಡು ವರ್ಷದಲ್ಲಿಯೇ ಸೇತುವೆ ಕುಸಿದಿದ್ದು, ಕುಸಿಯಲು ಕಾರಣವೇನು ಎಂದು ತನಿಖೆ ಕೈಗೊಳ್ಳಲಾಗುವುದು' ಎಂದು ಕಾರ್ಯನಿರ್ವಾಹಕ ಅಭಿಯಂತರ ನೀರವ್ ರಾಥೋಡ್ ಸುದ್ದಿ ಸಂಸ್ಥೆ ಎಎನ್‌ಐಗೆ ತಿಳಿಸಿದ್ದಾರೆ.
ಬಿಹಾರದ ಗಂಗಾ ನದಿಗೆ ಅಡ್ಡಲಾಗಿ ಕಟ್ಟಲಾಗಿದ್ದ ಸೇತುವೆ ಭಾಗಲ್ಪುರ ಮತ್ತು ಖಗರಿಯಾ ಜಿಲ್ಲೆಗಳನ್ನು ಸಂಪರ್ಕಿಸುವ ಮಾರ್ಗವಾಗಿತ್ತು. 2019ರಲ್ಲಿ ಈ ಸೇತುವೆಯನ್ನು ನಿರ್ಮಿಸಲಾಗಿದ್ದು, ಸುಮಾರು ₹1,770 ಕೋಟಿ ವ್ಯಯಿಸಲಾಗಿತ್ತು ಎಂದು ತಿಳಿದುಬಂದಿದೆ.