ನವದೆಹಲಿ: ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಭಾರತೀಯ ಕುಸ್ತಿ ಫೆಡರೇಶನ್ ಅಧ್ಯಕ್ಷ ಬ್ರಿಜ್‌ಭೂಷಣ್ ಶರಣ್ ಸಿಂಗ್ ವಿರುದ್ಧ ದೆಹಲಿ ಪೊಲೀಸರು ದೋಷಾರೋಪಪಟ್ಟಿ ಸಲ್ಲಿಸಿದ್ದು, 18 ವರ್ಷದೊಳಗಿನ ಕುಸ್ತಿಪಟು ನೀಡಿದ್ದ ದೂರನ್ನು ರದ್ದುಮಾಡುವಂತೆಯೂ ಶಿಫಾರಸು ಮಾಡಲಾಗಿದೆ.

'ಪೋಕ್ಸೊ ಪ್ರಕರಣದಲ್ಲಿ ತನಿಖೆ ಪೂರ್ಣಗೊಂಡ ಬಳಿಕ ನಾವು ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ್ದೇವೆ. ಸಿಆರ್‌ಪಿಸಿಯ ಸೆಕ್ಷನ್ 173ರ ಅಡಿ ನಾವು ಪೊಲೀಸ್ ವರದಿ ಸಲ್ಲಿಸಿದ್ದು, 18 ವರ್ಷದೊಳಗಿನ ದೂರುದಾರೆ ಮತ್ತು ಆಕೆಯ ತಂದೆಯ ಹೇಳಿಕೆ ಆಧಾರದ ಮೇಲೆ ದೂರನ್ನು ರದ್ದು ಮಾಡಬೇಕೆಂದು ಮನವಿ ಮಾಡಲಾಗಿದೆ' ಎಂದು ದೆಹಲಿ ಪೊಲೀಸ್ ಪಿಆರ್‌ಒ ಸುಮನ್ ನಲ್ವಾ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇತರೆ ಕುಸ್ತಿಪಟುಗಳು ನೀಡಿರುವ ದೂರಿನ ಆಧಾರದ ಮೇಲೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354(ಹಲ್ಲೆ ಅಥವಾ ಮಹಿಳೆಯ ಘನತೆ ಹಾಳುಮಾಡುವ ದುರುದ್ದೇಶದ ಕೃತ್ಯ), 354ಎ( ಲೈಂಗಿಕ ಕಿರುಕುಳ)ಮತ್ತು 354 ಡಿ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಅಮಾನತುಗೊಂಡಿರುವ ಕುಸ್ತಿ ಫೆಡರೇಶನ್‌ನ ಸಹಾಯಕ ಕಾರ್ಯದರ್ಶಿ ವಿನೋದ್ ತೋಮರ್ ವಿರುದ್ಧವೂ ಚಾರ್ಜ್‌ಶೀಟ್ ಸಲ್ಲಿಕೆಯಾಗಿದೆ.