ತಿರುವನಂತಪುರ: ದೇಶದ ಅತಿ ದೊಡ್ಡ ಪಾರಂಪರಿಕ ಸಂರಕ್ಷಣಾ ಯೋಜನೆಗಳಲ್ಲಿ ಒಂದಾದ ಮುಜಿರಿಸ್‍ಗೆ ಸಂಬಂಧಿಸಿದ 18 ಯೋಜನೆಗಳನ್ನು ಕೋವಿಡ್ ಸಾಂಕ್ರಾಮಿಕ ರೋಗದಿಂದ ಉಂಟಾದ ಅಡೆತಡೆಗಳನ್ನು ನಿವಾರಿಸಿ ನಿಗದಿತ ಸಮಯದಲ್ಲಿ ಪೂರ್ಣಗೊಳಿಸಲಾಗಿದೆ ಎಂದು ರಾಜ್ಯ ಪ್ರವಾಸೋದ್ಯಮ ಮತ್ತು ಲೋಕೋಪಯೋಗಿ ಸಚಿವ ಪಿ.ಎ. ಮುಹಮ್ಮದ್ ರಿಯಾಝ್ ಹೇಳಿರುವರು. ಮುಜಿರಿಸ್ ಪಾರಂಪರಿಕ ಯೋಜನೆಗಳ ಮೌಲ್ಯಮಾಪನ ಸಭೆಯ ನಂತರ ಸಚಿವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಕೋವಿಡ್ ಅವಧಿಯಲ್ಲಿ ಮುಜಿರಿಸ್ ಯೋಜನೆಗೆ ಸಂಬಂಧಿಸಿದ ನವೀಕರಣ ಕಾರ್ಯವು ಅಡ್ಡಿಪಡಿಸಿತು. ರಾಜ್ಯ ಸರ್ಕಾರದ ನಿರಂತರ ಮಧ್ಯಪ್ರವೇಶ ಹಾಗೂ ಆಯಾ ಜಿಲ್ಲೆಗಳ ಜನಪ್ರತಿನಿಧಿಗಳ ಒತ್ತಾಸೆಯಿಂದಾಗಿ ಅಡೆತಡೆಗಳನ್ನು ನಿವಾರಿಸಿ ಶೀಘ್ರವಾಗಿ ಯೋಜನೆ ಅನುಷ್ಠಾನಗೊಳಿಸಲು ಸಾಧ್ಯವಾಗಿದೆ ಎಂದು ತಿಳಿಸಿದರು.
ತ್ರಿಶೂರ್ ಜಿಲ್ಲೆಯ ಕೊಡುಂಗಲ್ಲೂರಿನಿಂದ ಆಲಪ್ಪುಳ ಜಿಲ್ಲೆಗಳ ಎರ್ನಾಕುಳಂವರೆಗಿನ ಯೋಜನೆಗಳು ನಿಗದಿತ ಸಮಯಕ್ಕೆ ಪೂರ್ಣಗೊಂಡಿವೆ. ಚೇರಮಾನ್ ಜುಮಾ ಮಸೀದಿ, ಪಟ್ಟಣಂ ಮಾಹಿತಿ ಕೇಂದ್ರ, ಕೊಡುಂಗಲ್ಲೂರ್ ದೇವಸ್ಥಾನದ ವಸ್ತುಸಂಗ್ರಹಾಲಯ, ಊಟುಪುರ, ತಿರುವಂಚಿಕುಲಂ ಕಾಲುವೆ ಕಚೇರಿ, ಕಿರ್ತಾಲಿ ದೇವಸ್ಥಾನ, ಮತಿಲಕಾಟ್ ಪಿ.ಎ. ಸೈಯದ್ ಮುಹಮ್ಮದ್ ಸ್ಮಾರಕ ಸಾಂಸ್ಕøತಿಕ ಕೇಂದ್ರ, ಪತಿಂತರಾಯಲಂ ಕೋವಿಲಕಂ, ಅಝೀಕ್ ಮತ್ತು ಮುನಕ್ಕಲ್‍ನಲ್ಲಿ ಬೋಟ್ ಜೆಟ್ಟಿಗಳು, ಉತ್ತರ ಪರವೂರಿನ ಕೋಟಾಯಿಲ್ ಕೋವಿಲಕಂ, ಹೋಲಿ ಕ್ರಾಸ್ ಚರ್ಚ್, ಪಲ್ಲಿಯಂ ಊಟುಪುರ ಮತ್ತು ಪಟ್ಟಣಂ ಪ್ರವಾಸಿ ವ್ಯಾಖ್ಯಾನ ಕೇಂದ್ರದಂತಹ ಯೋಜನೆಗಳನ್ನು ಜುಲೈ ಮತ್ತು ಆಗಸ್ಟ್‍ನಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಉದ್ಘಾಟಿಸಲಾಗುವುದು ಎಂದು ಸಚಿವರು ಹೇಳಿದರು.
ಕೋವಿಡ್ ಅವಧಿಯಲ್ಲಿ ಸ್ಥಗಿತಗೊಂಡಿದ್ದ ಯೋಜನೆಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಲು ರಾಜ್ಯ ಪ್ರವಾಸೋದ್ಯಮ ಇಲಾಖೆಗೆ ಸಾಧ್ಯವಾಗಿದೆ. ಸದ್ಯದ ಪರಿಸ್ಥಿತಿ ಏನೆಂದರೆ ಕೇರಳಕ್ಕೆ ಹೆಚ್ಚು ಪ್ರವಾಸಿಗರು ಬರುತ್ತಿದ್ದಾರೆ. ಮುಜಿರಿಸ್ ಯೋಜನೆಯ ಅಭಿವೃದ್ಧಿಯಿಂದ ಪ್ರವಾಸಿಗರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇದೆ ಎಂದು ಸಚಿವರು ಹೇಳಿದರು.
ಮುಜಿರಿಸ್ ದೇಶದ ಅತಿದೊಡ್ಡ ಪಾರಂಪರಿಕ ಸಂರಕ್ಷಣಾ ಯೋಜನೆಗಳಲ್ಲಿ ಒಂದಾಗಿದೆ. ಎರ್ನಾಕುಳಂ ಜಿಲ್ಲೆಯ ಉತ್ತರ ಪರವೂರ್ ತಾಲೂಕು ಮತ್ತು ತ್ರಿಶೂರ್ ಜಿಲ್ಲೆಯ ಕೊಡುಂಗಲ್ಲೂರು ತಾಲೂಕಿನಲ್ಲಿ ಸ್ಥಳಗಳನ್ನು ಸೇರಿಸುವುದರೊಂದಿಗೆ 2018 ರಲ್ಲಿ ಪ್ರಾರಂಭವಾದ ಯೋಜನೆಯಲ್ಲಿ ಪೆÇನ್ನಾನಿ ಮತ್ತು ಕೊಲ್ಲಂ ಅನ್ನು ನಂತರ ಸೇರಿಸಲಾಯಿತು.
ಈ ಯೋಜನೆಯು ವಸ್ತುಸಂಗ್ರಹಾಲಯಗಳು, ಧಾರ್ಮಿಕ ಸ್ಥಳಗಳು, ಕಡಲತೀರಗಳು ಮತ್ತು ಐತಿಹಾಸಿಕ ಸ್ಥಳಗಳನ್ನು ಒಳಗೊಂಡಂತೆ 3000 ವರ್ಷಗಳ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯನ್ನು ಸಂರಕ್ಷಿಸುವ ಗುರಿಯನ್ನು ಹೊಂದಿದೆ. ಯೋಜನೆಯು 25 ವಸ್ತುಸಂಗ್ರಹಾಲಯಗಳನ್ನು ಕಲ್ಪಿಸುತ್ತದೆ. ಮುಸಿರಿಸ್ ಕ್ರಿಸ್ತಪೂರ್ವ 1 ನೇ ಶತಮಾನದಲ್ಲಿ ದಕ್ಷಿಣ ಭಾರತದ ಪಶ್ಚಿಮ ಕರಾವಳಿಯಲ್ಲಿ ಸಕ್ರಿಯ ಬಂದರಾಗಿತ್ತು.
ಕೋವಳಂನಲ್ಲಿ ಮೂಲಸೌಕರ್ಯಗಳನ್ನು ಹೆಚ್ಚಿಸಲು ಕಿಪ್ಭಿ ನೆರವಿನೊಂದಿಗೆ ಯೋಜನೆಯ ಅನುμÁ್ಠನವು ಮುಂದುವರಿಯುತ್ತಿದೆ ಎಂದು ಸಚಿವರು ಹೇಳಿದರು. ವರ್ಕಲ ಸೇರಿದಂತೆ ಪ್ರವಾಸಿ ತಾಣಗಳಲ್ಲಿ ಮೂಲಸೌಕರ್ಯಗಳನ್ನು ಖಚಿತಪಡಿಸಿಕೊಳ್ಳಲು ಮತ್ತು ಜೀವರಕ್ಷಕರಿಗೆ ಸಂಬಂಧಿಸಿದ ವಿವಿಧ ಸಮಸ್ಯೆಗಳನ್ನು ಪರಿಹರಿಸಲು ಹೊಸ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದು ಅವರು ಹೇಳಿದರು.