ಟೊಮೆಟೊ ಬೆಲೆ ಕೇಳಿದ್ರೆ ಶಾಖ್ ಆಗುತ್ತೇವೆ, ನಾವು ಟೊಮೆಟೊ ಒಂದು ಕೆಜಿ ಕೇಳುತ್ತಿದ್ದೇವೆ ಇವರೇನು ಒಂದು ಬಾಕ್ಸ್ ಟೊಮೆಟೊ ರೇಟ್ ಕೇಳ್ತಾ ಇದ್ದೀವಾ? ಎಂದು ಒಂದು ಕ್ಷಣ ಗಲಿಬಿಲಿಯಾಗುವಷ್ಟರ ಮಟ್ಟಿಗೆ ದುಬಾರಿಯಾಗಿಯಾಗಿದೆ. ಒಂದು ಕೆಜಿ ಟೊಮೆಟೊ ಬೆಲೆ ರೂ. 100 ತಲುಪಿದೆ. ಕೆಲವರಿಗಂತೂ ಟೊಮೆಟೊ ಇಲ್ಲಾಂದ್ರೆ ಯಾವ ಸಾಂಬಾರ್, ಸಾರು ಮಾಡಿದರೂ ರುಚಿ ಅನಿಸಲ್ಲ. 4 ಬಳಸುವ ಟೊಮೆಟೊ ಬದಲಿಗೆ ಒಂದಾದರೂ ಬೇಕೇ ಬೇಕು, ಆಗಲೇ ಸಮಧಾನ.
ಇನ್ನುಇಷ್ಟು ದುಬಾರಿ ಬೆಲೆ ಕೊಟ್ಟು ತಂದ ಟೊಮೆಟೊದಲ್ಲಿ ಒಂದೆರಡು ಹಾಳಾದರೆ ಅಯ್ಯೋ ಎಂದು ಒದ್ದಾಡಿ ಬಿಡುತ್ತೇವೆ, ಟೊಮೆಟೊ ಕೆಜಿಗೆ 10 ರುಪಾಯಿ ಕೊಟ್ಟು ತಂದಾಗ ಒಂದೆರಡು ಟೊಮೆಟೊ ಹಾಳಾದರೆ ಟೊಮೆಟೊ ತೆಗೆದು ಕಸದ ಬುಟ್ಟಿಗೆ ಬಿಸಾಡಲು ಹಿಂದೆ ಮುಂದೆ ನೋಡಲ್ಲ.
ಆದರೆ ನೂರು ರುಪಾಯಿ ಕೊಟ್ಟು ತಂದ ಟೊಮೆಟೊ ಹಾಳಾದರೆ ಸಮಾತ್ರ ಅಯ್ಯೋ ಹಾಳಾಯ್ತಾಲ್ಲಾ ಎಂದು ಸಂಕಟ ಮಾಡುತ್ತೇವೆ ಅಲ್ವಾ? ಫ್ರಿಡ್ಜ್‌ನಲ್ಲಿಟ್ಟರೂ ಹಾಳಾಗುತ್ತೆ.. ವಸ್ತು ಒಂದೇ ಆದರೆ ಬೆಲೆ ದುಬಾರಿಯಾದಾಗ ಆ ವಸ್ತುಗಳು ಮೌಲ್ಯ ಹೆಚ್ಚಾಗುತ್ತೆ ಅಲ್ವಾ? ಏನೇ ಇರಲಿ ಈಗ ನಾವು ಟೊಮೆಟೊ ಬೇಗನೆ ಹಾಳಾಗದಂತೆ ಸಂರಕ್ಷಿಸಿ ಇಡುವುದು ಹೇಗೆ ಎಂದು ನೋಡೋಣ ಬನ್ನಿ:
ಟೊಮೆಟೊವನ್ನು ಫ್ರಿಡ್ಜ್‌ನಲ್ಲಿ ಸಂರಕ್ಷಿಸಿ ಇಡುವಾಗ
ನೀವು ಟೊಮೆಟೊವನ್ನು ಫ್ರಿಡ್ಜ್‌ನಲ್ಲಿ ಇಡುವುದಾದರೆ ಕೆಲವೊಂದು ಟಿಪ್ಸ್ ಫಾಲೋ ಮಾಡಿದರೆ ಮಾತ್ರ ನೀವು ತುಂಬಾ ಸಮಯದವರೆಗೆ ಸಂರಕ್ಷಿಸಿ ಇಡಬಹುದು, ಇಲ್ಲದಿದ್ದರೆ ಫ್ರಿಡ್ಜ್‌ನಲ್ಲಿಟ್ಟರೂ ಹಾಳಾಗುವುದು. ನೀವು ಗಮನಿಸರಬಹುದು, ಹಣ್ಣಾದ ಟೊಮೆಟೊ ಫ್ರಿಡ್ಜ್‌ನಲ್ಲಿಟ್ಟಾಗ ಅದು ತುಂಬಾ ಮೆತ್ತಗಾಗುವುದು ಅಥವಾ ಫ್ರಿಡ್ಜ್‌ನಿಂದ ಹೊರತೆಗೆದಾಗ ಅದನ್ನು ಅಡುಗೆಗೆ ಬಳಸಲು ಯೋಗ್ಯವಾಗಿರಲ್ಲ. ಫ್ರಿಡ್ಜ್‌ನ ಟೆಂಪರೇಚರ್‌ನಲ್ಲಿ ವ್ಯತ್ಯಾಸ ಉಂಟಾದರೂ ಈ ರೀತಿ ಟೊಮೆಟೊ ಹಾಳಾಗುತ್ತದೆ.
ನೀವು ಟೊಮೆಟೊವನ್ನು ಫ್ರಿಡ್ಜ್‌ನಲ್ಲಿ ಈ ರೀತಿ ಸಂರಕ್ಷಣೆ ಮಾಡಿ
ನೀವು ಟೊಮೆಟೊವನ್ನು ಫ್ರಿಡ್ಜ್‌ನಲ್ಲಿ ಇಡುವಾಗ ಹಣ್ಣಾಗದ ಟೊಮೆಟೊದ ತೊಟ್ಟು ಕೆಳಭಾಗದಲ್ಲಿ ಇರುವಂತೆ ಜೋಡಿಸಿ ಇಡಿ.
ಮೊದಲಿಗೆ ಟೊಮೆಟೊವನ್ನು ತೊಳೆಯಿರಿ: ಮೊದಲಿಗೆ ಹರಿಯುವ ನೀರಿನಲ್ಲಿ ಟೊಮೆಟೊವನ್ನು ತೊಳೆಯಿರಿ, ನಂತರ ಟವಲ್‌ನಿಂದ ಟೊಮೆಟೊವನ್ನು ಒರೆಸಿ.
- ಒಂದು ದೊಡ್ಡ ಪಾತ್ರೆಯಲ್ಲಿ ಬಿಸಿ ನೀರನ್ನು ಕಾಯಿಸಿ, ಅದರಲ್ಲಿ ಟೊಮೆಟೊ ಹಾಕಿ 30 ಸೆಕೆಂಡ್ ಇಡಿ, ನಂತರ ತಣ್ಣನೆಯ ನೀರಿನಲ್ಲಿ ಹಾಕಿ, ನಂತರ ಟೊಮೆಟೊ ತಣ್ಣಗಾದ ಮೇಲೆ ತೆಗೆದ ಮೇಲೆ ಅದರಲ್ಲಿರುವ ಹೆಚ್ಚಿನಂಶದ ನೀರನ್ನು ಒರೆಸಿ, ಅವುಗಳನ್ನು ಪ್ಲಾಸ್ಟಿಕ್ ಬ್ಯಾಗ್‌ನಲ್ಲಿ ತುಂಬಿ, ನಂತರ ಅದನ್ನು ಗಾಳಿಯಾಡದಂತೆ ಮುಚ್ಚಬೇಕು.
- ನಂತರ ಆ ಟೊಮೆಟೊ ಬ್ಯಾಗ್ ಅನ್ನು ಫ್ರೀಝರ್‌ನಲ್ಲಿಟ್ಟರೆ 18 ತಿಂಗಳಾದರೂ ಹಾಳಾಗಲ್ಲ.
ಇನ್ನು ನೀವು ಸ್ವಲ್ಪ ಸಮಯಕ್ಕೆ ಟೊಮೆಟೊ ಫ್ರಿಡ್ಜ್‌ನಲ್ಲಿ ಇಡುವುದಾದರೆಹಸಿ-ಹಣ್ಣು ಟೊಮೆಟೊ ಜೊತೆಗೆ ಇಡಬೇಡಿ. ಹಸಿ ಟೊಮೆಟೊವನ್ನು ಪ್ರತ್ಯೇಕ ಮಾಡಿ, ಹಣ್ಣಾದ ಟೊಮೆಟೊ ಪ್ರತ್ಯೇಕ ಮಾಡಿ ಫ್ರಿಡ್ಜ್‌ನಲ್ಲಿಡಿ. ಕಾಯಿ ಟೊಮೆಟೊ ಫ್ರಿಡ್ಜ್‌ನಲ್ಲಿಟ್ಟರೆ ನೀವು ಒಂದು ತಿಂಗಳವರೆಗೆ ಬಳಸಬಹುದು. ಇನ್ನು ನಾಡಿ ಟೊಮೆಟೊಗಿಂತ ಹೈಬ್ರಿಡ್ ಟೊಮೆಟೊವನ್ನು ಸಂರಕ್ಷಿಸಿ ಇಡಿ. ನಾಟಿ ಟೊಮೆಟೊವಾದರೆ ಬೇಗನೆ ಹಾಳಾಗುವುದು.