ಲಖನೌ: 2021ರ ಪ್ರತಿಷ್ಠಿತ ಗಾಂಧಿ ಶಾಂತಿ ಪ್ರಶಸ್ತಿಗೆ ಭಾಜನವಾಗಿರುವ ಉತ್ತರಪ್ರದೇಶದ ಗೋರಕ್‌ಪುರದ ಗೀತಾ ಪ್ರೆಸ್, ಪ್ರಶಸ್ತಿಯ ಭಾಗವಾಗಿರುವ ₹ 1 ಕೋಟಿ ನಗದನ್ನು ಸ್ವೀಕರಿಸಲು ನಿರಾಕರಿಸಿದೆ.
ಲಖನೌ: 2021ರ ಪ್ರತಿಷ್ಠಿತ ಗಾಂಧಿ ಶಾಂತಿ ಪ್ರಶಸ್ತಿಗೆ ಭಾಜನವಾಗಿರುವ ಉತ್ತರಪ್ರದೇಶದ ಗೋರಕ್‌ಪುರದ ಗೀತಾ ಪ್ರೆಸ್, ಪ್ರಶಸ್ತಿಯ ಭಾಗವಾಗಿರುವ ₹ 1 ಕೋಟಿ ನಗದನ್ನು ಸ್ವೀಕರಿಸಲು ನಿರಾಕರಿಸಿದೆ.
ಗೋರಕ್‌ಪುರದಲ್ಲಿ ಸೋಮವಾರ ಪತ್ರಕರ್ತರೊಂದಿಗೆ ಮಾತನಾಡಿದ ಗೀತಾ ಪ್ರೆಸ್‌ನ ವ್ಯವಸ್ಥಾಪಕ ಡಾ. ಲಾಲ್ ಮಣಿ ತಿವಾರಿ ಅವರು, 'ಗೀತಾ ಪ್ರೆಸ್ ತನಗೆ ನೀಡಿದ ಯಾವುದೇ ಗೌರವ ಅಥವಾ ಯಾವುದೇ ದೇಣಿಗೆಯನ್ನು ಸ್ವೀಕರಿಸಿಲ್ಲ. ಅಂತೆಯೇ ₹ 1ಕೋಟಿ ಮೊತ್ತವು 'ದೇಣಿಗೆ' ಆಗಿರುವುದರಿಂದ ಹಣವನ್ನು ಸ್ವೀಕರಿಸಲಾಗದು. ಆದರೆ, ನಗದು ಹೊರತು ಪಡಿಸಿ ಗೀತಾ ಪ್ರೆಸ್‌ನ ಟ್ರಸ್ಟಿಗಳು ಗಾಂಧಿ ಶಾಂತಿ ಪ್ರಶಸ್ತಿಯನ್ನು ಮಾತ್ರ ಸ್ವೀಕರಿಸಲು ನಿರ್ಧರಿಸಿದ್ದಾರೆ' ಎಂದು ತಿಳಿಸಿದ್ದಾರೆ.