ಕೋಝಿಕ್ಕೋಡ್: ರೈಲಿನೊಳಗೆ ಬೆಂಕಿ ಹಚ್ಚಲು ಯತ್ನಿಸಿದ ಯುವಕನನ್ನು ಬಂಧಿಸಲಾಗಿದೆ. ಕಣ್ಣೂರು-ಎರ್ನಾಕುಳಂ ಇಂಟರ್‍ಸಿಟಿ ಎಕ್ಸ್‍ಪ್ರೆಸ್‍ನಲ್ಲಿ ಈ ಘಟನೆ ನಡೆದಿದೆ.
ಮಹಾರಾಷ್ಟ್ರ ಮೂಲದ 20 ವರ್ಷದ ಯುವಕನನ್ನು ಬಂಧಿಸಲಾಗಿದೆ. ರೈಲು ಕೊಯಿಲಾಂಡಿ ತಲುಪಿದಾಗ ಯುವಕ ಸಿಕ್ಕಿಬಿದ್ದಿದ್ದಾನೆ.
ರೈಲು ಕೊಯಿಲಾಂಡಿ ದಾಟುತ್ತಿದ್ದಾಗ ಈ ಘಟನೆ ನಡೆದಿದೆ. ಶಂಕಿತ ಪ್ರಯಾಣಿಕ ಕಂಪಾರ್ಟ್‍ಮೆಂಟ್‍ನೊಳಗೆ ಅಂಟಿಸಿದ್ದ ಎಚ್ಚರಿಕೆಯ ಸ್ಟಿಕ್ಕರ್ ಅನ್ನು ಹರಿದು ಸುಟ್ಟು ಹಾಕಲು ಯತ್ನಿಸಿದ್ದಾರೆ ಎಂದು ವರದಿಯಾಗಿದೆ. ಯುವಕನನ್ನು ಪ್ರಯಾಣಿಕರು ಹಿಡಿದು ಆರ್‍ಪಿಎಫ್‍ಗೆ ಒಪ್ಪಿಸಿದ್ದಾರೆ.