ಬದಿಯಡ್ಕ: ಬದಿಯಡ್ಕ ಪಂಚಾಯತ್ ಬಂಟರ ಸಂಘದ ನೇತೃತ್ವದಲ್ಲಿ ನಡೆದ ಬಂಟರ ಸಮ್ಮೇಳನ 2023 ಸಮರೂಪ ಸಮಾರಂಭ ನಡೆಯಿತು. ಜಿಲ್ಲಾ ಬಂಟರ ಸಂಘದ ಉಪಾಧ್ಯಕ್ಷ ಚಂದ್ರಹಾಸ ರೈ ಪೆರಡಾಲಗುತ್ತು ಉದ್ಘಾಟಿಸಿ ಮಾತನಾಡಿ ಬಂಟರಲ್ಲಿ ನಾಯಕತ್ವ ಗುಣ ರಕ್ತಗತವಾಗಿ ಬಂದಿದೆ, ಶಿಕ್ಷಣ ರಾಜಕೀಯ ಸಾಂಸ್ಕøತಿಕ ಧಾರ್ಮಿಕ ಕಾರ್ಯಕ್ರಮದಲ್ಲಿ ಮುಂಚೂಣಿಯಾಗಿ ನಿಂತು ಸಮಾಜದಲ್ಲಿರುವ ಬಡ ಕುಟುಂಬಗಳಿಗೆ ಸಹಾಯ ಹಸ್ತ ಮಾಡಬೇಕಾಗಿ ಕರೆ ನೀಡಿದರು.
ಬದಿಯಡ್ಡ್ಕ ಪಂಚಾಯತ್ ಬಂಟರ ಸಂಘದ ಅಧ್ಯಕ್ಷ ಶ್ರೀ ನಿರಂಜನ ರೈ ಪೆರಡಾಲ ಅಧ್ಯಕ್ಷತೆ ವಹಿಸಿದರು. ಕುಂಬಳೆ ಪೀರ್ಕಾ ಬಂಟರ ಸಂಘದ ಅಧ್ಯಕ್ಷ ಶ್ರೀ ಪದ್ಮನಾಭ ಶೆಟ್ಟಿ ವಳಮಲೆ, ಉದ್ಯಮಿ ಹರಿಪ್ರಸಾದ್ ರೈ ಸ್ಕಂದ, ಜನಪ್ರತಿನಿಧಿ ಶುಭಲತಾ ರೈ, ನಿವೃತ್ತ ಬರೋಡ ಬ್ಯಾಂಕ್ ಉದ್ಯೋಗಿ ಪ್ರಕಾಶ್ ಶೆಟ್ಟಿ ಕಡಾರುಬೀಡು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು, ಪುತ್ತೂರು ಫಿಲೋಮಿನ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ. ಪ್ರಸನ್ನ ರೈ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿ ಈ ರೀತಿಯ ಕಾರ್ಯಕ್ರಮಗಳಿಂದ ಸಮಾಜದ ಬಂಟರನ್ನು ಒಟ್ಟುಗೂಡಿಸುವ ಸಂಘದ ಪ್ರಯತ್ನ ಶ್ಲಾಘನೀಯಎಂದು ಅಭಿಪ್ರಾಯಪಟ್ಟರು.
ಕೇರಳ ಬ್ಯಾಂಕ್ ಬೋವಿಕ್ಕಾನ ಶಾಖೆಯ ಪ್ರಬಂಧಕ ಉಮೇಶ್ ರೈ ಮೇಗಿನ ಕಡಾರು, ಉದನೇಶ್ವರ ದೇವಸ್ಥಾನದ ಮೊಕ್ತೆಸರ ಜಗನ್ನಾಥ ರೈ ಪೆರಡಾಲ ಗುತ್ತು, ಕುಂಬಳೆ ವಲಯ ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಅಶೋಕ ರೈ ಕೊರೆಕ್ಕಾನ, ಬದಿಯಡ್ಕ ಪಂಚಾಯತ್ ಸಂಘದ ಉಪಾಧ್ಯಕ್ಷ ಜಗನ್ನಾಥ ರೈ ಕೊರೆಕ್ಕ್ಕಾನ, ರವೀಂದ್ರನಾಥ ಶೆಟ್ಟಿ ವಳಮಲೆ ಶುಭ ಹಾರೈಸಿದರು, ಎಸ್ ಎಲ್ ಸಿ ಪರೀಕ್ಷೆಯಲ್ಲಿ ಎಲ್ಲಾ ವಿಷಯಗಳಲ್ಲಿ ಎ ಪ್ಲಸ್ ಪಡೆದ ಬದಿಯಡ್ಕ ಪಂಚಾಯತಿಗೆ ಒಳಪಟ್ಟ ವಿದ್ಯಾರ್ಥಿಗಳನ್ನು ಗೌರವಿಸಿ ಅಭಿನಂದಿಸಲಾಯಿತು, ಬದಿಯಡ್ಕ ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕುಮಾರ್ ಶೆಟ್ಟಿ ಬೇಳ ಸ್ವಾಗತಿಸಿ, ಕೋಶಾಧಿಕಾರಿ ದಯಾನಂದ ರೈ ವಂದಿಸಿದರು. ಅಧ್ಯಾಪಕಿ ಅಶ್ವಿನಿ ಪ್ರದೀಪ್ ಶೆಟ್ಟಿ ಬೇಳ ಕಾರ್ಯಕ್ರಮ ನಿರ್ವಹಣೆ ಮಾಡಿದರು.