ಚೆನ್ನೈ: ವಾಹನ ಖರೀದಿಗಾಗಿ ಪೂರ್ಣ ಹಣವನ್ನು ಪಾವತಿಸಿದ ನಂತರವೂ ಮಹಿಳೆಗೆ ಸ್ಕೂಟರ್ನ್ನು ಒದಗಿಸಲು ವಿಫಲವಾದ ಕಂಪನಿಗೆ 2.05 ಲಕ್ಷ ರೂ.ನ್ನು ಪರಿಹಾರವಾಗಿ ಪಾವತಿಸುವಂತೆ ಆದೇಶಿಸಿರುವ ಘಟನೆ ಚೆನ್ನೈನಲ್ಲಿ ನಡೆದಿದೆ.
ನಿಶಾ.ಕೆ ಎಂಬ ಮಹಿಳೆ ಪುರಸಾವಲ್ಕಮ್ ನಿವಾಸಿಯಾಗಿದ್ದು, ಎರಡು ವರ್ಷಗಳ ಹಿಂದೆ ಒಲಾ ಕಂಪನಿಯ ಅಧಿಕೃತ ಅಪ್ಲಿಕೇಶನ್ ಮೂಲಕ 2021ರ ಜುಲೈನಲ್ಲಿ 20.499 ರೂ.
ಜತೆಗೆ, ವಾಹನ ನೋಂದಣಿಗೆ ಅಗತ್ಯವಾದ ದಾಖಲೆಗಳನ್ನು ಅಪ್‌ಲೋಡ್ ಮಾಡಲು ಹೇಳಿದ್ದರು. ಆದರೆ ಓಲಾ ತನ್ನ ಅಪ್ಲಿಕೇಶನ್‌ನಿಂದ ಬುಕಿಂಗ್ನ್ನು ರದ್ದುಗೊಳಿಸುವ ಆಯ್ಕೆಯನ್ನು ಸಹ ತೆಗೆದು ಹಾಕಿತ್ತು. ನಿಶಾ ಕಸ್ಟಮರ್ ಕೇರ್ನ್ನು ಸಂಪರ್ಕಿಸಿದಾಗ ಅವಳಿಗೆ ಯಾವುದೇ ಪ್ರತಿಕ್ರಿಯೆಯೂ ದೊರೆತಿರಲಿಲ್ಲ.
ಇದರಿಂದ ಬೇಸತ್ತ ನಿಶಾ, ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಪ್ರಕರಣ ದಾಖಲಿಸಿದ್ದಳು. ಈ ಪ್ರಕರಣವನ್ನು ಪರಿಶೀಲಿಸಿದ ಆಯೋಗವು, ಓಲಾಗೆ ಸೇವೆಯಲ್ಲಿನ ಕೊರತೆ ಮತ್ತು ಅನ್ಯಾಯದ ವ್ಯಾಪಾರದ ಭಾಗವಾಗಿ 2,00,000ರೂ. ಪರಿಹಾರ ಮತ್ತು ದೂರುದಾರರಿಗೆ ಉಂಟಾದ ಕಾನೂನು ವೆಚ್ಚಗಳಿಗೆ 5,000 ರೂ. ಪಾವತಿಸಲು ಆದೇಶಿಸಿದೆ.
ಇದರೊಂದಿಗೆ, ಆಯೋಗವು ಓಲಾಗೆ ಎಸ್ 1 ಪ್ರೊ ಮಾದರಿಯನ್ನು ಎರಡು ತಿಂಗಳೊಳಗೆ ತಲುಪಿಸಲು ಅಥವಾ ಸಂಪೂರ್ಣ ಮೊತ್ತವನ್ನು 9% ಬಡ್ಡಿಯೊಂದಿಗೆ ಮರುಪಾವತಿಸಲು ನಿರ್ದೇಶಿಸಿದೆ.