ಪಣಜಿ (PTI): ಪ್ರಜಾಪ್ರಭುತ್ವದ ಹಬ್ಬವಾದ 2024ರ ಲೋಕಸಭಾ ಚುನಾವಣೆಗೆ ಆಗಮಿಸುವಂತೆ ಜಿ 20ಯ ಪ್ರತಿನಿಧಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಆಹ್ವಾನ ನೀಡಿದ್ದಾರೆ.
ಪಣಜಿ (PTI): ಪ್ರಜಾಪ್ರಭುತ್ವದ ಹಬ್ಬವಾದ 2024ರ ಲೋಕಸಭಾ ಚುನಾವಣೆಗೆ ಆಗಮಿಸುವಂತೆ ಜಿ 20ಯ ಪ್ರತಿನಿಧಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಆಹ್ವಾನ ನೀಡಿದ್ದಾರೆ.
ಗೋವಾದಲ್ಲಿ ನಡೆದ ಜಿ 20 ಪ್ರವಾಸೋದ್ಯಮ ಸಚಿವರ ಸಭೆಯ ಉದ್ಘಾಟನೆಯ ವೇಳೆ ಮೋದಿ ಅವರ ಧ್ವನಿಮುದ್ರಿಕೆಯ ಸಂದೇಶವನ್ನು ಪ್ರಸಾರ ಮಾಡಲಾಯಿತು.
'ಚರ್ಚೆಗಳು ಹಾಗೂ ಗೋವಾ ಮಾರ್ಗಸೂಚಿಯು (ಗೋವಾ ರೋಡ್‌ಮ್ಯಾಪ್) ಪ್ರವಾಸೋದ್ಯಮದ ಪರಿವರ್ತಕ ಶಕ್ತಿಯನ್ನು ಅರಿತುಕೊಳ್ಳುವ ಸಾಮೂಹಿಕ ಪ್ರಯತ್ನಗಳನ್ನು ವೃದ್ಧಿಸುತ್ತದೆ' ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
'ಗೋವಾ ಮಾರ್ಗಸೂಚಿ ಹಾಗೂ ಕ್ರಿಯಾಯೋಜನೆ'ಯನ್ನು ಅನುಮೋದಿಸುವ ಸಚಿವರ ಅಧಿಕೃತ ಪ್ರಕಟಣೆಯನ್ನು ಪ್ರವಾಸೋದ್ಯಮ ಸಚಿವರ ಸಭೆಯ ಕೊನೆಯ ದಿನದಂದು (ಗುರುವಾರ) ನೀಡಲಾಗುವುದು.