HEALTH TIPS

ಪಾಸ್‌ಪೋರ್ಟ್‌ ಸೇವಾ 2.0 ಯೋಜನೆಗೆ ಶೀಘ್ರದಲ್ಲೇ ಚಾಲನೆ: ಜೈಶಂಕರ್‌

               ಬೆಂಗಳೂರು: ಹೊಸ ಪಾಸ್‌ಪೋರ್ಟ್‌ಗಳನ್ನು ಒದಗಿಸುವ ಮತ್ತು ಇ- ಪಾಸ್‌ಪೋರ್ಟ್‌ಗಳ ಉನ್ನತೀಕರಣದಂಥ ಕಾರ್ಯಕ್ರಮಗಳನ್ನು ಒಳಗೊಂಡಿರುವ ಎರಡನೇ ಹಂತದ ಪಾಸ್‌ಪೋರ್ಟ್‌ ಸೇವಾ ಯೋಜನೆಗೆ (ಪಿಎಸ್‌ಪಿ- ವರ್ಷನ್‌ 2.0) ಭಾರತ ಸದ್ಯದಲ್ಲೇ ಚಾಲನೆ ನೀಡಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.

              ಜೈಶಂಕರ್‌ ಅವರು ಪಾಸ್‌ಪೋರ್ಟ್‌ ಸೇವಾ ದಿವಸವಾದ ಶನಿವಾರ ಘೋಷಣೆ ಮಾಡಿದ್ದಾರೆ.

ಈ ಕುರಿತು ಜೈಶಂಕರ್‌ ಅವರು ಹೊರಡಿಸಿರುವ ಪತ್ರದ ಚಿತ್ರವನ್ನು ವಿದೇಶಾಂಗ ವ್ಯವಹಾರ ಸಚಿವಾಲಯದ ವಕ್ತಾರ ಅರಿಂದಮ್‌ ಬಾಗ್ಚಿ ಅವರು ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.               ಪಾಸ್‌ಪೋರ್ಟ್‌ ಮತ್ತು ಅದಕ್ಕೆ ಸಂಬಂಧಿಸಿದ ಸೇವೆಗಳನ್ನು ಜನರಿಗೆ ಸಕಾಲಿಕವಾಗಿ, ಪಾರದರ್ಶಕವಾಗಿ ಮತ್ತು ಸಮರ್ಥ ರೀತಿಯಲ್ಲಿ ದೊರಕುವಂತೆ ಮಾಡಬೇಕೆಂದು ಭಾರತ ಮತ್ತು ವಿದೇಶಗಳ ಪಾಸ್‌ಪೋರ್ಟ್‌ ಸೇವಾ ಸಂಸ್ಥೆಗಳಿಗೆ ಜೈಶಂಕರ್‌ ಅವರು ಪತ್ರದಲ್ಲಿ ಮನವಿ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯಾದ 'ಸುಲಲಿತ ಜನಜೀವನ' (ಈಸ್‌ ಆಫ್‌ ಲಿವಿಂಗ್‌) ಆಶಯದ ಅಡಿ ಪಾಸ್‌ಪೋರ್ಟ್‌ ಸೇವೆಗಳನ್ನು ಉನ್ನತೀಕರಿಸಲಾಗುತ್ತಿದೆ.

              ಇಎಎಸ್‌ಇ (ಈಸ್‌) ಎಂಬುದಕ್ಕೆ ಅವರು ವಿವರಣೆಯನ್ನೂ ಕೊಟ್ಟಿದ್ದಾರೆ. ಇ ಎಂದರೆ ಡಿಜಿಟಲ್‌ ಸೌಲಭ್ಯ ಬಳಸಿ ನಾಗರಿಕರಿಗೆ ಪಾಸ್‌ಪೋರ್ಟ್‌ ಸೇವೆಯನ್ನು ಉತ್ತಮಗೊಳಿಸುವುದು. ಎ- ಕೃತಕ ಬುದ್ಧಮತ್ತೆ ಆಧರಿತ ಸೇವಾ ಸೌಲಭ್ಯ, ಎಸ್‌- ಚಿಪ್‌ ಹೊಂದಿರುವ ಈ- ಪಾಸ್‌ಪೋರ್ಟ್‌ ಒದಗಿಸುವ ಮೂಲಕ ವಿದೇಶ ಪ್ರಯಾಣ ಸುಲಭಗೊಳಿಸುವುದು, ಇ- ದತ್ತಾಂಶ ಭದ್ರತೆಯನ್ನು ಉನ್ನತೀಕರಿಸುವುದು ಎಂದು ಅವರು ವಿವರಿಸಿದ್ದಾರೆ.

                  ಪಾಸ್‌ಪೋರ್ಟ್‌ ಸೇವಾ ದಿವಸದ ಅಂಗವಾಗಿ ಭಾರತ ಮತ್ತು ವಿದೇಶಗಳಲ್ಲಿಯ ಪಾಸ್‌ಪೋರ್ಟ್‌ ಜಾರಿ ಮಾಡುವ ಎಲ್ಲಾ ಪ್ರಾಧಿಕಾರಗಳು ಮತ್ತು ಕೇಂದ್ರೀಯ ಪಾಸ್‌ಪೋರ್ಟ್‌ ಸಂಸ್ಥೆಯ ಸಿಬ್ಬಂದಿಗೆ ಅಭಿನಂದನೆ ಸಲ್ಲಿಸಲು ಸಂತೋಷವಾಗುತ್ತಿದೆ. ಪಾಸ್‌ಪೋರ್ಟ್‌ ಸೇವೆಯಲ್ಲಿ ಅತ್ಯುತ್ತಮವಾದುದನ್ನೇ ನೀಡುವ ನಿಟ್ಟಿನಲ್ಲಿ ಭಾರತದ ಈವರೆಗಿನ ಸಾಧನೆಯನ್ನು ಸಂಭ್ರಮಿಸಲು ಇದು ಅತ್ಯಂತ ಸೂಕ್ತವಾದ ಸಂದರ್ಭ ಎಂದು ಅವರು ಹೇಳಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries