HEALTH TIPS

20 ವರ್ಷಗಳ ನಂತರ ಅಮೆರಿಕದಲ್ಲಿ ಮತ್ತೆ ಪತ್ತೆಯಾಯ್ತು ಮಲೇರಿಯಾ ಪ್ರಕರಣಗಳು

                   ಅಮೆರಿಕ:ಕೆಲವು ವರ್ಷಗಳ ಹಿಂದೆ ಮಲೇರಿಯಾ ಇಡೀ ವಿಶ್ವವನ್ನೇ ಒಮ್ಮೆ ನಡುಗಿಸಿತ್ತು. ಆದ್ರೆ ನಂತರದ ದಿನಗಳಲ್ಲಿ ಅದಕ್ಕೆ ಪರಿಹಾರ ಕಂಡುಕೊಂಡರು. ಬಳಿಕ ಮಲೇರಿಯಾ ರೋಗ ಕಡಿಮೆಯಾಗುತ್ತಾ ಬಂತು. ಆದ್ರೆ ಇದೀಗ ಮತ್ತೆ ಪತ್ತೆಯಾಗಿದೆ. ಅಮೆರಿಕದಲ್ಲಿ ಮಲೇರಿಯಾ ಹರಡುತ್ತಿದೆ ಎಂದು ವರದಿಯಾಗಿದೆ. ದೇಶದಲ್ಲಿ 20 ವರ್ಷಗಳ ನಂತರ ಮಲೇರಿಯಾ ವರದಿಯಾಗಿದೆ.

               ಇದೀಗ ಮೂರು ಹೊಸ ಮಲೇರಿಯಾ ಪ್ರಕರಣಗಳು ವರದಿಯಾಗಿವೆ. ಟೆಕ್ಸಾಸ್‌ನಲ್ಲಿ ಒಂದು ಮತ್ತು ಫ್ಲೋರಿಡಾದಲ್ಲಿ ಎರಡು ಪ್ರಕರಣಗಳು ಪತ್ತೆಯಾಗಿದೆ. ಇನ್ನು ಈ ರೋಗ ಸ್ಥಳೀಯವಾಗಿ ಹರಡುತ್ತಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
            ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ಪ್ರಕಾರ, ಮಲೇರಿಯಾ ಕೊನೆಯದಾಗಿ ಯುನೈಟೆಡ್ ಸ್ಟೇಟ್ಸ್‌ನಲ್ಲಿ 2003 ರಲ್ಲಿ ವರದಿಯಾಗಿದೆ. ನಂತರ ಫ್ಲೋರಿಡಾದ ಪಾಮ್ ಬೀಚ್ ಕೌಂಟಿಯಲ್ಲಿ ಸಹ ಪ್ರಕರಣಗಳು ವರದಿಯಾಗಿವೆ.
               ಯುನೈಟೆಡ್ ಸ್ಟೇಟ್ಸ್​​ನಲ್ಲಿ ವರದಿಯಾದ ಹೆಚ್ಚಿನ ಮಲೇರಿಯಾ ಪ್ರಕರಣಗಳು ವಿದೇಶಕ್ಕೆ ಪ್ರಯಾಣಿಸಿದವರಿಂದ ಪತ್ತೆಯಾದ್ರೆ, ಇನ್ನೂ ಕೆಲವು ಮಲೇರಿಯಾ ಹರಡುವ ಸೊಳ್ಳೆಗಳಿಂದ ಕಚ್ಚಲ್ಪಟ್ಟವುಗಳಾಗಿವೆ. ಆದರೆ ಈಗ ವಿದೇಶ ಪ್ರವಾಸ ಮಾಡದವರಲ್ಲಿ ಮಲೇರಿಯಾ ವರದಿಯಾಗಿದೆ. ಇದರೊಂದಿಗೆ ಈ ರೋಗ ಸ್ಥಳೀಯವಾಗಿ ಇತರರಿಗೂ ಹರಡುವ ಆತಂಕ ಎದುರಾಗಿದೆ.ಸೊಳ್ಳೆಯು ಒಬ್ಬ ವ್ಯಕ್ತಿಯನ್ನು ಕಚ್ಚಿದಾಗ ಆ ಸಂದರ್ಭದಲ್ಲಿ ಮಲೇರಿಯಾ ಹರಡುತ್ತದೆ. ಸೊಳ್ಳೆಯೊಳಗೆ ಪರಾವಲಂಬಿ ಬೆಳೆಯುತ್ತದೆ, ಅದು ಇತರ ಜನರನ್ನು ಕಚ್ಚಿದಾಗ ರೋಗವನ್ನು ಇತರರಿಗೆ ಹರಡುತ್ತದೆ.
ಇನ್ನು ಜ್ವರ, ಶೀತ, ತಲೆನೋವು, ಸ್ನಾಯು ನೋವು, ವಾಕರಿಕೆ, ವಾಂತಿ, ಅತಿಸಾರ ಮತ್ತು ಆಯಾಸ ಮಲೇರಿಯಾದ ಲಕ್ಷಣಗಳು. ಚಿಕಿತ್ಸೆ ನೀಡದೆ ಬಿಟ್ಟರೆ, ಇದು ಕಾಮಾಲೆ, ರಕ್ತಹೀನತೆ, ಮೂತ್ರಪಿಂಡ ವೈಫಲ್ಯ, ಮೂರ್ಛೆ, ಕೋಮಾ ಮುಂತಾದ ಗಂಭೀರ ಸಮಸ್ಯೆಗಳನ್ನು ಉಂಟುಮಾಡಬಹುದು.
              ಯುನೈಟೆಡ್ ಸ್ಟೇಟ್ಸ್‌ನಾದ್ಯಂತ ಸೊಳ್ಳೆಯಿಂದ ಹರಡುವ ಮತ್ತು ಕೀಟಗಳಿಂದ ಹರಡುವ ರೋಗಗಳ ಹರಡುವಿಕೆಯಲ್ಲಿ ಹವಾಮಾನ ಬದಲಾವಣೆಯು ಪ್ರಮುಖ ಪಾತ್ರ ವಹಿಸುತ್ತಿದೆ. ಮಲೇರಿಯಾ-ಹರಡುವ ಸೊಳ್ಳೆಗಳು ಸದ್ಯ ಸರಸೋಟಾ ಕೌಂಟಿಯ ಜೌಗು ಪ್ರದೇಶದಲ್ಲಿ ಕಂಡುಬಂದಿವೆ.
              ಮಲೇರಿಯಾ ಒಂದು ಮಾರಣಾಂತಿಕ ಕಾಯಿಲೆಯಾಗಿದೆ. ಇದನ್ನು ತಡೆಗಟ್ಟುವಿಕೆ ಮತ್ತು ನಿಯಂತ್ರಣದ ಅಗತ್ಯವನ್ನು ಎತ್ತಿ ಹಿಡಿಯಲು ಪ್ರತಿ ವರ್ಷ ಏಪ್ರಿಲ್ 25 ರಂದು ವಿಶ್ವ ಮಲೇರಿಯಾ ದಿನವನ್ನು ಆಚರಿಸಲಾಗುತ್ತದೆ.
              ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, 2020 ರಲ್ಲಿ ಪ್ರಪಂಚದಾದ್ಯಂತ ಸುಮಾರು 241 ಮಿಲಿಯನ್ ಮಲೇರಿಯಾ ಪ್ರಕರಣಗಳು ಪತ್ತೆಯಾಗಿದೆ. ಅಲ್ಲದೆ 6.27 ಲಕ್ಷ ಜನರು ಇದರಿಂದ ಸಾವನ್ನಪ್ಪಿದ್ದಾರಂತೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries