ಕಾಸರಗೋಡು: ರಾಜ್ಯ ಸರ್ಕಾರದ ಎರಡನೇ ವರ್ಷಾಚರಣೆಯ 100 ದಿನಗಳ ಕ್ರಿಯಾ ಯೋಜನೆಯನ್ವಯ ಬೇಡಡ್ಕ ಪಂಚಾಯಿತಿ ವ್ಯಾಪ್ತಿಯಲ್ಲಿ 6ನೇ ವಾರ್ಡು ಚೆಂಬಕ್ಕಾಡ್ ಪ.ವರ್ಗ ಕಾಲನಿಯ 20 ಮನೆಗಳ ಕಾಮಗಾರಿ ಪೂರ್ತಿಘೊಳಿಸಲಾಘಿದ್ದು, ಕೀಲಿಕೈ ಹಸ್ತಾಂತರ ಸಮಾರಂಭ ನಡೆಯಿತು. ಶಾಸಕ ಸಿ.ಎಚ್.ಕುಞಂಬು ಫಲಾನುಭವಿಗಳಿಗೆ ಕೀಲಿಕೈ ಹಸ್ತಾಂತರಿಸಿದರು.
ಈ ಸಂದರ್ಭ ಮಾತನಾಡಿದ ಅವರು, ಕಾಲನಿಯಲ್ಲಿ ಬಾಕಿ ಉಳಿದ ಮನೆಗಳ ನಿರ್ಮಾಣಕ್ಕೆ ಸರ್ಕಾರ ಮತ್ತೆ ಒಂದು ಕೋಟಿ ರೂಪಾಯಿ ಮಂಜೂರು ಮಾಡಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಕೇರಳದ ಎಲ್ಲಾ ನಿರಾಶ್ರಿತ ಕುಟುಂಬಗಳಿಗೆ ಸುರಕ್ಷಿತ ಮನೆ ಮತ್ತು ಗೌರವಯುತ ಜೀವನವನ್ನು ಒದಗಿಸುವ ಸರ್ಕಾರದ ಭರವಸೆ ತನ್ನ ಗುರಿಯನ್ನು ತಲುಪುತ್ತಿರುವುದಾಗಿ ತಿಳಿಸಿದರು.
ಕೇರಳದಲ್ಲಿ ಇದುವರೆಗೆ 4 ಲಕ್ಷ ಮನೆಗಳು ಪೂರ್ಣಗೊಂಡಿದ್ದು, 1 ಲಕ್ಷ ಮನೆಗಳ ಕಾಮಗಾರಿ ನಡೆಯುತ್ತಿದೆ. ಕೇರಳ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ನೀಡಿದ ಎಲ್ಲ ಭರವಸೆಗಳನ್ನು ಯಶಸ್ವಿಯಾಗಿ ಈಡೇರಿಸುತ್ತಾ ಬಂದಿದ್ದು, ಮೂರು ವರ್ಷಗಳಲ್ಲಿ ಕೇರಳವನ್ನು ಕಡು ಬಡತನ ಮುಕ್ತ ರಾಜ್ಯವನ್ನಾಗಿ ಮಾಡುವುದೇ ಸರ್ಕಾರದ ಗುರಿ ಎಂದು ತಿಳಿಸಿದರು. ತಲ ಐದು ಸೆಂಟ್ಸ್ ಜಾಗದಲ್ಲಿ 6 ಲಕ್ಷ ರೂ.ವೆಚ್ಚದಲ್ಲಿ ಸೌಲಭ್ಯಗಳೊಂದಿಗೆ ಮನೆ ನಿರ್ಮಿಸಿಕೊಡಲಾಗಿದೆ.
Á್ರಮ ಪಂಚಾಯಿತಿ ಅಧ್ಯಕ್ಷೆ ಎಂ.ಧನ್ಯ ಅಧ್ಯಕ್ಷತೆ ವಹಿಸಿದ್ದರು. ಬೇಡಡ್ಕ ಗ್ರಾಮ ಪಂಚಾಯಿತಿ ವಿಇಒ ಎ.ಜಿನೇಶ್ ವರದಿ ಮಂಡಿಸಿದರು. ಕಾರಡ್ಕ ಬ್ಲಾಕ್ ಪಂಚಾಯತ್ ಉಪಾಧ್ಯಕ್ಷೆ ಕೆ.ರಮಣಿ ಮುಂತಾದವರು ಉಪಸ್ಥಿತರಿದ್ದರು.