ಎರ್ನಾಕುಳಂ: ಕೊಚ್ಚಿ ವಾಟರ್ ಮೆಟ್ರೋ ಸೇವೆಗೆ ಜನದಟ್ಟಣೆ ಹೆಚ್ಚುತ್ತಿದೆ.
ಹೆಚ್ಚಿನ ಜಲಮಾರ್ಗಗಳನ್ನು ಜೋಡಿಸಿ ಇನ್ನೂ 20 ಟರ್ಮಿನಲ್‍ಗಳನ್ನು ನಿರ್ಮಿಸಲು ನಿರ್ಧರಿಸಲಾಗಿದೆ. ಈ ಪೈಕಿ 16 ಟರ್ಮಿನಲ್ ನಿರ್ಮಾಣಕ್ಕೆ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗಿದೆ. ಇದಕ್ಕಾಗಿ ಟೆಂಡರ್ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ.
ನೆಟ್ಟೂರು, ಥೈಕುಡಂ, ತೊಪ್ಪುಂಪಾಡಿ, ಮಟ್ಟಂಚೇರಿ, ತಾಂಟೋನಿ ತುರುಟ್, ವರಪುಳ ಮತ್ತು ಕಡಮಕುಡಿ ಮುಂತಾದ ಪ್ರದೇಶಗಳಿಗೆ ಸೇವೆ ವಿಸ್ತರಿಸಲಾಗುವುದು. ಹೊಸ ಟರ್ಮಿನಲ್‍ಗಳ ಆಗಮನದಿಂದ 10 ದ್ವೀಪಗಳಲ್ಲಿನ ಟ್ರಾಫಿಕ್ ಸಮಸ್ಯೆಗಳು ಬಗೆಹರಿಯಲಿವೆ. ಯೋಜನೆಯಲ್ಲಿ 23 ದೊಡ್ಡ ದೋಣಿಗಳು ಮತ್ತು 55 ಸಣ್ಣ ದೋಣಿಗಳು ಇವೆ.
ಬೋಟ್‍ಗಳನ್ನು ಕೊಚ್ಚಿನ್ ಶಿಪ್‍ಯಾರ್ಡ್ ತಯಾರಿಸಿದೆ. ಈ ಹಿಂದೆ ಆರಂಭವಾದ ಬೋಳ್ಗಟ್ಟಿ, ದಕ್ಷಿಣ ಚಿತ್ತೂರು, ಏಲೂರು ಮತ್ತು ಚೇರನಲ್ಲೂರಿನಲ್ಲಿ ಹೊಸ ಟರ್ಮಿನಲ್‍ಗಳ ಕಾಮಗಾರಿ ಅಂತಿಮ ಹಂತದಲ್ಲಿದೆ. ಟೆಂಡರ್ ಪ್ರಕ್ರಿಯೆ ಮುಗಿದ ನಂತರ ಹೊಸ ಟರ್ಮಿನಲ್‍ಗಳ ನಿರ್ಮಾಣ ಕಾರ್ಯ ಶೀಘ್ರದಲ್ಲೇ ಆರಂಭವಾಗಲಿದೆ.