ಬದಿಯಡ್ಕ: ಮಾನ್ಯ ಕಾರ್ಮಾರು ಶ್ರೀ ಮಹಾವಿಷ್ಣು ಕ್ಷೇತ್ರದ ಜೀರ್ಣೋದ್ಧಾರ ಕಾರ್ಯದ ಪ್ರಯುಕ್ತ ಶ್ರೀದೇವರ ಬಾಲಾಲಯ ಪ್ರತಿಷ್ಠೆ ಜೂನ್ 19 ಸೋಮವಾರದಿಂದ ಜೂ.21 ಬುಧವಾರದ ತನಕ ನಡೆಯಲಿರುವುದು. ಜೂ.19 ಸೋಮವಾರ ಸಂಜೆ 6 ಗಂಟೆಗೆ ಕ್ಷೇತ್ರ ತಂತ್ರಿವರ್ಯ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳವರ ಆಗಮನ, ಪೂರ್ಣಕುಂಭ ಸ್ವಾಗತ, 6.30ರಿಂದ ಆಚಾರ್ಯವರಣ, ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹ ವಾಚನ, ಪ್ರಾಸಾದ ಶುದ್ಧಿ, ಸ್ಥಳಶುದ್ಧಿ, ರಕ್ಷೋಘ್ನ ಹೋಮ, ವಾಸ್ತುಹೋಮ, ಹೋಮಕುಂಡಗಳ ಶುದ್ಧಿ, ವಾಸ್ತುಬಲಿ ನಡೆಯಲಿದೆ.
ಜೂನ್.20ರಂದು ಮಂಗಳವಾರ ಬೆಳಗ್ಗೆ 5.30ರಿಂದ ಗಣಪತಿ ಹೋಮ, ಶಾಂತಿ ಹೋಮ, ಪ್ರಾಯಶ್ಚಿತ್ತ ಹೋಮ, ಶಯ್ಯಾಪೂಜೆ, ನಿದ್ರಾಕಲಶಪೂಜೆ, ಕುಂಭೇಶ ಕರ್ಕರಿ ಪೂಜೆ, ಅಧಿವಾಸ ಹೋಮ, ಅನುಜ್ಞಾಕಲಶಪೂಜೆ, ಅನುಜ್ಞಾ ಕಲಶಾಭಿಷೇಕ, ತತ್ವ ಹೋಮ, ತತ್ವಕಲಶಪೂಜೆ, ಜೀವೋದ್ವಾಸನೆ, ಜೀವಕಲಶ, ಶಯ್ಯೋನ್ನಯನ, ಮಹಾಪೂಜೆ, ಅನ್ನಸಂತರ್ಪಣೆ. ಸಂಜೆ 6 ಗಂಟೆಯಿಂದ ಕುಂಭೇಶ ಕರ್ಕರಿ ಪೂಜೆ, ಬ್ರಹ್ಮಕಲಶಪೂಜೆ, ಅವಾಸ ಹೋಮ, ಧ್ಯಾನಾಧಿವಾಸ, ಮಂಡಲಪೂಜೆ, ಶಿರಸ್ತತ್ವಹೋಮ, ಕಲಶಾಧಿವಾಸ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ.
ಜೂನ್ 21 ಬುಧವಾರದಂದು ಬೆಳಗ್ಗೆ 6 ಗಂಟೆಯಿಂದ ಗಣಪತಿಹೋಮ, ಪ್ರತಿಷ್ಠಾಪಾಣಿ, 10 ಗಂಟೆಗೆ ಶ್ರೀಮದ್ ಎಡನೀರು ಮಠಾೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವ ಆಗಮನ, ಪೂರ್ಣಕುಂಭ ಸ್ವಾಗತ, 10.20ರಿಂದ 11.10ರ ಸಿಂಹಲಗ್ನ ಸುಮುಹೂರ್ತದಲ್ಲಿ ಶ್ರೀ ಮಹಾವಿಷ್ಣು ದೇವರ ಬಾಲಾಲಯ ಪ್ರತಿಷ್ಠೆ, ಜೀವಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆಯೊಂದಿಗೆ ಕಾರ್ಯಕ್ರಮ ಸಂಪನ್ನವಾಗಲಿದೆ.