ಚೆನ್ನೈ: ತಮಿಳುನಾಡಿನಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ 10 ಹೊಸ ಕೋವಿಡ್ -19 ಪ್ರಕರಣಗಳು ದಾಖಲಾಗಿವೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಚೆನ್ನೈ: ತಮಿಳುನಾಡಿನಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ 10 ಹೊಸ ಕೋವಿಡ್ -19 ಪ್ರಕರಣಗಳು ದಾಖಲಾಗಿವೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
10 ಹೊಸ ಸೋಂಕಿತರ ಪೈಕಿ ಐವರು ವಿದೇಶದಿಂದ ಬಂದಿರುವರಾಗಿದ್ದಾರೆ. ಅವರನ್ನು ಪರೀಕ್ಷಿಸಿದಾಗ ಕೋವಿಡ್ ಇರುವುದು ಪತ್ತೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಐವರಲ್ಲಿ ತಲಾ ಇಬ್ಬರು ಅರಬ್ ರಾಷ್ಟ್ರ ಮತ್ತು ಸಿಂಗಾಪುರದಿಂದ ಬಂದಿದ್ದರೆ, ಒಬ್ಬರು ಫ್ರಾನ್ಸ್‌ನಿಂದ ಆಗಮಿಸಿದ್ದಾರೆ. ಉಳಿದ ಐದು ಪ್ರಕರಣಗಳು ಚೆಂಗಲ್ಪಟ್ಟು (ಮೂರು), ಕಾಂಚೀಪುರಂ (ಒಂದು) ಮತ್ತು ತಿರುಪ್ಪೂರ್‌ನಿಂದ (ಒಂದು) ವರದಿಯಾಗಿದೆ.
ಚೆನ್ನೈನಲ್ಲಿ ಯಾವುದೇ ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿಲ್ಲ.
ರಾಜ್ಯದಲ್ಲಿ ಪ್ರಸ್ತುತ 31 ಸಕ್ರಿಯ ಕೋವಿಡ್ -19 ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.