ನವದೆಹಲಿ: ನಾಲ್ಕು ದಿನಗಳ ಅಮೆರಿಕ ಪ್ರವಾಸಕ್ಕೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ ಅವರು ವಿವಿಧ ವಲಯಗಳಲ್ಲಿನ 24 ಪ್ರಮುಖ ವ್ಯಕ್ತಿಗಳನ್ನು ಭೇಟಿಯಾಗಲಿದ್ದಾರೆ. ಇವರಲ್ಲಿ ಟೆಸ್ಲಾ ಸಂಸ್ಥಾಪಕ ಹಾಗೂ ಟ್ವಿಟ್ಟರ್ ಮುಖ್ಯಸ್ಥ ಎಲಾನ್ ಮಸ್ಕ್ ಅವರನ್ನು ಭೇಟಿ ಮಾಡಲಿದ್ದಾರೆ.

ಪ್ರಧಾನಿ ಅವರ ಪ್ರವಾಸ ಇದೇ 21ರಂದು ಆರಂಭವಾಗಲಿದೆ. ಭೇಟಿ ಅವಧಿಯಲ್ಲಿ ಅಧ್ಯಕ್ಷ ಜೋ ಬೈಡನ್ ಅವರೊಂದಿಗೆ ದ್ವಿಪಕ್ಷೀಯ ವ್ಯಾಪಾರ, ಹೂಡಿಕೆ ಬಾಂಧವ್ಯ ಹಾಗೂ ಸಂವಹನ, ಬಾಹ್ಯಾಕಾಶ ಮತ್ತು ಉತ್ಪಾದನೆ ಕ್ಷೇತ್ರದಲ್ಲಿ ಪಾಲುದಾರಿಕೆ ವೃದ್ಧಿ ಕುರಿತು ಚರ್ಚಿಸುವರು.'ಅಮೆರಿಕ ಪ್ರವಾಸ ಬಳಿಕ ಪ್ರಧಾನಿ ಅವರು ಈಜಿಪ್ಟ್‌ಗೆ ಎರಡು ದಿನಗಳ ಭೇಟಿಗಾಗಿ ಇದೇ 24ರಂದು ತೆರಳುವರು.
ತಮ್ಮ ಪ್ರವಾಸದ ವೇಳೆಯಲ್ಲಿ ಪ್ರಧಾನಿ ಮೋದಿ ಅವರು ವಿವಿಧ ಕ್ಷೇತ್ರಗಳಲ್ಲಿನ ಪ್ರಮುಖ 24 ಜನರನ್ನು ಭೇಟಿ ಮಾಡಲಿದ್ದಾರೆ. ನೊಬೆಲ್ ಪ್ರಶಸ್ತಿ ವಿಜೇತರು, ಅರ್ಥಶಾಸ್ತ್ರಜ್ಞರು, ಕಲಾವಿದರು, ವಿಜ್ಞಾನಿಗಳು, ವಿದ್ವಾಂಸರು, ವಾಣಿಜ್ಯೋದ್ಯಮಿಗಳು, ಶಿಕ್ಷಣ ತಜ್ಞರು ಮತ್ತು ಆರೋಗ್ಯ ಕ್ಷೇತ್ರದ ತಜ್ಞರು ಸೇರಿದ್ದಾರೆ. ಟೆಸ್ಲಾ ಸಂಸ್ಥಾಪಕ ಹಾಗೂ ಟ್ವಿಟ್ಟರ್ ಮುಖ್ಯಸ್ಥ ಎಲಾನ್ ಮಸ್ಕ್, ಭೌತಶಾಸ್ತ್ರಜ್ಞ ನೀಲ್ ಡಿಗ್ರಾಸ್ ಟೈಸನ್, ಗ್ರ್ಯಾಮಿ ಪ್ರಶಸ್ತಿ ವಿಜೇತ ಭಾರತೀಯ-ಅಮೆರಿಕನ್ ಫಲ್ಗುಣಿ ಶಾ, ಬಿಲಿಯನೇರ್ ಹೂಡಿಕೆದಾರ ರೇ ಡಾಲಿಯೊ ಅವರು ಸೇರಿದ್ದಾರೆ.
ಚಂದ್ರಿಕಾ ಟಂಡನ್, ಪೌಲ್ ರೋಮರ್, ಜೆಫ್ ಸ್ಮಿತ್, ಮೈಕೆಲ್ ಫ್ರೋಮನ್, ಡೇನಿಯಲ್ ರಸ್ಸೆಲ್, ನಿಕೋಲಸ್ ನಾಸಿಮ್, ಡಾ, ಪೀಟರ್, ಸ್ಟೀಫನ್ ಕ್ಲಾಸ್ಕೊ ಸೇರಿದಂತೆ ಮೋದಿ ಹಲವರನ್ನು ಭೇಟಿ ಮಾಡಲಿದ್ದಾರೆ.