ಮಂಜೇಶ್ವರ: ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಪ್ರಾಯೋಜತ್ವ ಹಾಗೂ ರಾಷ್ಟ್ರೀಯ ಸಾಮಾಜಿಕ ಸಂಸ್ಕ್ರತಿಕ ಅಭಿವೃದ್ಧಿ ಪ್ರತಿಷ್ಠಾನ(ಎನ್‍ಎಸ್‍ಸಿಡಿಎಫ್), ಮಂಜೇಶ್ವರ ಗಿಳಿವಿಂಡು ಕನ್ನಡ ಸಾಹಿತ್ಯಿಕ ಮತ್ತು ಸಾಂಸ್ಕøತಿಕ ವೇದಿಕೆ ಸಹಕಾರದೊಂದಿಗೆ ವಿಚಾರಗೋಷ್ಠಿ, ಕವಿಗೋಷ್ಠಿ, ಸಾಧಕರಿಗೆ ಸನ್ಮಾನ, ಸಾಂಸ್ಕøತಿಕ ಕಾರ್ಯಕ್ರಮ"ಕನ್ನಡೋತ್ಸವ'ಜೂ. 24ರಂದು ಬೆಳಗ್ಗೆ 0ರಿಂದ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಕಾಲೇಜು ಸಭಾಂಗಣದಲ್ಲಿ ಜರುಗಲಿದೆ.
ಖ್ಯಾತ ಬರಹಗಾರ್ತಿ, ಸಂಶೋಧಕಿ ಡಾ. ಲಕ್ಷ್ಮೀ ಜಿ.ಪ್ರಸಾದ್ ಸಮಾರಂಭ ಉದ್ಘಾಟಿಸುವರು. ಎನ್‍ಎಸ್‍ಸಿಡಿಎಫ್ ಅಧ್ಯಕ್ಷ ಗಂಗಾಧರ ಗಾಂಧಿ ಅಧ್ಯಕ್ಷತೆ ವಹಿಸುವರು. ಕಾಲೇಜು ಪ್ರಾಂಶುಪಾಲ ಪ್ರೊ. ಮಹಮ್ಮದಾಲಿ ಕೆ. ದಿಕ್ಸೂಚಿ ಭಾಷಣ ಮಾಡುವರು. ಸಾಹಿತಿ, ಚಿಂತಕಿ ಎಚ್.ಎಸ್. ಪ್ರತಿಮಾ ಹಾಸನ್ ಹಾಗೂ ಮಂಜೇಶ್ವರ ಕಾಲೇಜಿನ ಹಿರಿಯ ಮೇಲ್ವಿಚಾರಕ ದಿದೇಶ್ ಕೆ. ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. 'ಕಾಸರಗೋಡು ಕನ್ನಡ ಹೋರಾಟ, ಸಾಹಿತ್ಯ, ಸಂಸ್ಕøತಿ-ಇತಿಹಾಸ'ಎಂಬ ವಿಷಯದಲ್ಲಿ ಸಮಾಜಸೇವಕಿ ಆಯಿಷಾ ಪೆರ್ಲ ಉಪನ್ಯಾಸ ನೀಡುವರು. ಪ್ರಾಧ್ಯಾಪಕ ಪ್ರೊ. ಶಿವಶಂಕರ್ ಗೌರವ ಉಪಸ್ಥಿತಿ ವಹಿಸುವರು. ಡಾ. ಫ್ರಾನ್ಸಿಸ್ ಕ್ಸೇವಿಯರ್ ದಾವಣಗೆರೆ ಹಾಗೂ ಕವಿ ಹಿತೇಶ್ ಕುಮಾರ್ ಎ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸುವರು. ಈ ಸಮದರ್ಭ ಕಾನೂನು ಹೋರಾಟಗಾರ ಸುಂದರ ಬಾರಡ್ಕ, ಸಾಮಾಜಿಕ ಕ್ಷೇತ್ರದ ಕುಶಾಲ್ ಕುಮಾರ್ ಕೆ ಹಾಗೂ ಮಾಧ್ಯಮ ಕ್ಷೇತ್ರದಲ್ಲಿ ಜಗದೀಶ್ ಕೂಡ್ಲು ಅವರನ್ನು ಸನ್ಮಾನಿಸಲಾಗುವುದು. ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ವಿದುಷಿ ಕಾವ್ಯಾ ಭಟ್ ಪೆರ್ಲ ಮತ್ತು ಬಳಗದವರಿಂದ ನೃತ್ಯಾರ್ಚನೆ, ಭರತನಾಟ್ಯ, ಜಾನಪದ ನೃತ್ಯ ಜಾರ್ಯಕ್ರಮ ನಡೆಯುವುದು.