ಪೆರ್ಲ: ಸವಿಹೃದಯದ ಕವಿ ಮಿತ್ರರು ವೇದಿಕೆ ಪೆರ್ಲ ಹಾಗೂ ಸಮತಾ ಸಾಹಿತ್ಯ ವೇದಿಕೆ ಪಾಣಾಜೆ ಸಹಯೋಗದಲ್ಲಿ ಇತ್ತೀಚೆಗೆ ನಿಧನರಾದ ಸಾಹಿತ್ಯ ಪೆÇೀಷಕರೂ, ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿಯ ಪೆರ್ಲ ಘಟಕದ ಅಧ್ಯಕ್ಷರೂ ಆಗಿದ್ದ ದಿ.ಅಬ್ದುಲ್ ರೆಹಮಾನ್ ಪೆರ್ಲ ಅವರಿಗೆ ನುಡಿ ನಮನ ಮತ್ತು ಮುಂಗಾರು ಕವಿಗೋಷ್ಠಿ ಜೂ.25ರಂದು ಮಧ್ಯಾಹ್ನ 2 ರಿಂದ ಪೆರ್ಲ ವ್ಯಾಪಾರ ಭವನದಲ್ಲಿ ನಡೆಯಲಿದೆ.
ಕೇಂದ್ರೀಯ ವಿದ್ಯಾಲಯದ ವಿಶ್ರಾಂತ ಮುಖ್ಯ ಶಿಕ್ಷಕ, ಸಾಹಿತಿ ಎಸ್.ಎನ್.ಭಟ್ ಸೈಪಂಗಲ್ಲು ಉದ್ಘಾಟಿಸುವರು.ನಿವೃತ್ತ ಪ್ರಿನ್ಸಿಪಾಲ್, ಸಾಹಿತಿ ಡಾ.ಬೇ.ಸಿ.ಗೋಪಾಲಕೃಷ್ಣ ಅಧ್ಯಕ್ಷತೆ ವಹಿಸುವರು. ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಉಪಧ್ಯಕ್ಷ, ಎಸ್.ಸಿ. ಬ್ಯಾಂಕ್ ನಿರ್ದೇಶಕ ಪ್ರಸಾದ್ ಟಿ. ಪೆರ್ಲ ಹಾಗೂ ನಿವೃತ್ತ ಸಬ್ ರಿಜಿಸ್ಟ್ರಾರ್ ಮಹಮ್ಮದಾಲಿ ಪೆರ್ಲ ನುಡಿನಮನ ಸಲ್ಲಿಸುವರು.ಜಿ.ಪಂ.ಸದಸ್ಯ ನಾರಾಯಣ ನಾಯ್ಕ ಅಡ್ಕಸ್ಥಳ, ಬದಿಯಡ್ಕ ಅಂಬೇಡ್ಕರ್ ವಿಚಾರ ವೇದಿಕೆ ಅಧ್ಯಕ್ಷ ರಾಮ ಪಟ್ಟಾಜೆ, ಹಿರಿಯ ಸಾಹಿತಿ ಹರೀಶ ಪೆರ್ಲ, ನಳಿನಿ ಸೈಪಂಗಲ್ಲು ಮತ್ತಿತರರು ಉಪಸ್ಥಿತರಿರುವರು.