ಕಾಸರಗೋಡು: ಕೇರಳದಲ್ಲಿ ರಸ್ತೆ ಅಂಚಿಗೆ ಅಳವಡಿಸಿರುವ ಎಐ ಕ್ಯಾಮರಾಗಳ ಮೂಲಕ ಸಂಚಾರಿ ಕಾನೂನು ಉಲ್ಲಂಘಿಸುವವರಿಂದ ದಂಡ ವಸೂಲಿ ನಡೆಸುವ ಕಾರ್ಯ ಸೋಮವಾರ ಆರಂಭಗೊಂಡಿದ್ದು, ಕಾಸರಗೋಡು ಸೇರಿದಂತೆ ರಾಜ್ಯಾದ್ಯಂತ ಭರೋಬ್ಬರಿ 28891 ಕೇಸುಗಳು ದಾಖಲಾಗಿದೆ. ಅತಿ ಹೆಚ್ಚು 4778ಪ್ರಕರಣ ಕೊಲ್ಲಂ ಜಿಲ್ಲೆಯಲ್ಲಿ ಹಾಗೂ ಮಲಪ್ಪುರಂ ಜಿಲ್ಲೆಯಲ್ಲಿ 545ಕನಿಷ್ಠ ಕೇಸು ದಾಖಲಾಗಿದೆ.
ಸೋಮವಾರ ಒಂದೇ ದಿನ ಕಾಸರಗೋಡು ಜಿಲ್ಲೆಯಲ್ಲಿ 1040, ಕಣ್ಣೂರು 2437, ವಯನಾಡ್ 1148, ಕೋಯಿಕ್ಕೋಡ್ 1550, ಮಲಪ್ಪುರಂ 545, ಪಾಲಕ್ಕಾಡ್ 1007, ತೃಶ್ಯೂರ್ 3995, ಇಡುಕ್ಕಿ 1483, ಕೋಟ್ಟಾಯಂ 2194, ಎರ್ನಾಕುಳಂ 1889, ಆಲಪ್ಪುಯ 1288, ಪತ್ತನಂತಿಟ್ಟ 1177, ಕೊಲ್ಲಂ 4778 ಹಾಗೂ ತಿರುವನಂತಪುರದಲ್ಲಿ 4362ಪ್ರಕರಣ ದಾಖಲಾಗಿದೆ.
ಪ್ರತಿ ಬಾರಿ ರಸ್ತೆ ಸಂಚಾರಿ ಕಾನೂನು ಉಲ್ಲಂಘಿಸುವವರೂ ಭಾರಿ ಪ್ರಮಾಣದ ದಂಡ ತೆರಬೇಕಾಗುತ್ತಿದೆ. ವಹನ ಚಾಲನೆ ಮಧ್ಯೆ ಮೊಬೈಲ್ ಸಂಭಾಷಣೆಗೆ 2ಸಾವಿರ ರಊ, ಸೀಟ್ ಬೆಲ್ಟ್ ಧರಿಸದಿದ್ದಲ್ಲಿ 500ರೂ. ದಂಡ ವಸೂಲಿ ನಡೆಸಲಾಗುತ್ತಿದೆ. ಅನಧಿಕೃತ ಪರ್ಕಿಂಗ್ಗೆ 250ರೂ, ಅತಿಯಾದ ವಗದಿಂದ ಕೂಡಿದ ಚಾಲನೆಗೆ 1500ರೂ, ದ್ವಿಚಕ್ರ ವಆಹನಗಳಲ್ಲಿ ಇಬ್ಬರಿಗಿಂತ ಹೆಚ್ಚು ಮಂದಿ ಸಂಚರಿಸಿದಲ್ಲಿ 1ಸಾವಿರ ರೂ. ದಂಡ ವಸೂಲಿ ನಡೆಯುತ್ತಿದೆ. ದ್ವಿಚಕ್ರವಾಹನಗಳಲ್ಲಿ ಮೂರನೇ ವ್ಯಕ್ತಿ 12ವರ್ಷಕ್ಕಿಂತ ಕೆಳಗಿನವರಾಗಿದ್ದರೆ, ತತ್ಕಾಲಕ್ಕೆ ನೋಟೀಸು ಜಾರಿಗೊಳಿಸದಿರಲು ತೀರ್ಮಾನಿಸಲಾಗಿದೆ. ರಾತ್ರಿ ವೇಳೆಯಲ್ಲೂ ಸ್ಪಷ್ಟ ಚಿತ್ರಗಳು ದಾಖಲಾಗುವ ರೀತಿಯ ಗುಣಮಟ್ಟದ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ದಂಡದ ಬಗ್ಗೆ ಯಾರಿಗಾದರೂ, ತಗಾದೆಗಳಿದ್ದಲ್ಲಿ, ಅಪೀಲು ಸಲ್ಲಿಸಲೂ ಅವಕಾಶ ಕಲ್ಪಿಸಲಾಗಿದೆ.