ನವದೆಹಲಿ: ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳಿಗೆ ತೆರಿಗೆ ಹಂಚಿಕೆಯ 3ನೇ ಕಂತಾಗಿ ₹1,18,280 ಕೋಟಿಯನ್ನು ಬಿಡುಗಡೆ ಮಾಡಿದೆ.
ಸಾಮಾನ್ಯವಾಗಿ ಮಾಸಿಕ ₹59,140 ಕೋಟಿ ಬಿಡುಗಡೆ ಮಾಡಲಾಗುತ್ತಿತ್ತು. ಆದರೆ, ಬಂಡವಾಳ ವೆಚ್ಚವನ್ನು ವೇಗಗೊಳಿಸಲು, ಅಭಿವೃದ್ಧಿ/ಕಲ್ಯಾಣ ಸಂಬಂಧಿತ ವೆಚ್ಚಗಳಿಗೆ ಹಣಕಾಸು ಒದಗಿಸಲು ಹಾಗೂ ಆದ್ಯತೆಯ ಯೋಜನೆಗಳಿಗೆ ಸಂಪನ್ಮೂಲಗಳನ್ನು ಲಭ್ಯವಾಗುವಂತೆ ಮಾಡಲು ಜೂನ್ 2023ರ ಬಾಕಿ ಕಂತಿನ ಜೊತೆಗೆ ಒಂದು ಮುಂಗಡ ಕಂತನ್ನು ರಾಜ್ಯಗಳಿಗೆ ಬಿಡುಗಡೆ ಮಾಡಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಯಾವ ರಾಜ್ಯಕ್ಕೆ ಎಷ್ಟು?
1. ಆಂಧ್ರ ಪ್ರದೇಶ- ₹4,787 ಕೋಟಿ
2. ಅರುಣಾಚಲ ಪ್ರದೇಶ- ₹2,078 ಕೋಟಿ
3. ಅಸ್ಸಾಂ- ₹3,700 ಕೋಟಿ
4. ಬಿಹಾರ - ₹11,897 ಕೋಟಿ
5. ಛತ್ತೀಸ್‌ಗಢ- ₹4,030 ಕೋಟಿ
6. ಗೋವಾ- ₹457 ಕೋಟಿ
7. ಗುಜರಾತ್- 4,114 ಕೋಟಿ
8. ಹರಿಯಾಣ- ₹1,293 ಕೋಟಿ
9. ಹಿಮಾಚಲಪ್ರದೇಶ- ₹982 ಕೋಟಿ
10. ಜಾರ್ಖಂಡ್-₹3,912 ಕೋಟಿ
11. ಕರ್ನಾಟಕ: ₹4,314 ಕೋಟಿ
12. ಕೇರಳ- ₹2,277 ಕೋಟಿ
13. ಮಧ್ಯಪ್ರದೇಶ- ₹9,285 ಕೋಟಿ
14.ಮಹಾರಾಷ್ಟ್ರ- ₹7,472 ಕೋಟಿ
15. ಮಣಿಪುರ- ₹847 ಕೋಟಿ
16. ಮೇಘಾಲಯ- ₹907 ಕೋಟಿ
17. ಮಿಜೋರಾಂ- ₹591 ಕೋಟಿ
18. ನಾಗಾಲೆಂಡ್- ₹673 ಕೋಟಿ
19. ಒಡಿಶಾ- ₹5,356 ಕೋಟಿ
20. ಪಂಜಾಬ್- ₹2,137 ಕೋಟಿ
21. ರಾಜಸ್ಥಾನ- ₹7,128 ಕೋಟಿ
22. ಸಿಕ್ಕಿಂ- ₹459 ಕೋಟಿ
23. ತಮಿಳುನಾಡು- ₹4,825 ಕೋಟಿ
24.ತೆಲಂಗಾಣ- ₹2486 ಕೋಟಿ
25. ತ್ರಿಪುರಾ- ₹837 ಕೋಟಿ
26.ಉತ್ತರ ಪ್ರದೇಶ- ₹21,218 ಕೋಟಿ
27. ಉತ್ತರಾಖಂಡ- ₹1,322 ಕೋಟಿ
28. ಪಶ್ಚಿಮ ಬಂಗಾಳ- ₹8,898 ಕೋಟಿ