ಹೈದರಾಬಾದ್: ಜಗತ್ತಿನ ಪ್ರಥಮ 3ಡಿ ಮುದ್ರಿತ ಹಿಂದು ದೇವಾಲಯವೊಂದನ್ನು ತೆಲಂಗಾಣದಲ್ಲಿ ನಿರ್ವಿುಸಲಾಗುತ್ತಿದೆ. ನಗರದ ಸಿದ್ದಪೇಟೆಯ ಬುರುಗಪಲ್ಲಿಯಲ್ಲಿರುವ ಗೇಟೆಡ್ ವಿಲ್ಲಾ ಕಮ್ಯುನಿಟಿ 'ಚರ್ವಿತ ಮೀಡೋಸ್'ನಲ್ಲಿ ಈ ಮೂರು ಹಂತದ ಪ್ರಿಂಟೆಡ್ ಮಂದಿರವನ್ನು ಅಪ್ಸುಜಾ ಇನ್ಫ್ರಾಟೆಕ್ ಸಂಸ್ಥೆ ನಿರ್ವಿುಸುತ್ತಿದೆ.

ಸೇತುವೆ ನಿರ್ವಣ
ಹೈದರಾಬಾದ್ನ ಭಾರತೀಯ ತಂತ್ರಜ್ಞಾನ ಸಂಸ್ಥೆಯ (ಐಐಟಿ) ಸಹಯೋಗದೊಂದಿಗೆ ಸಿಂಪ್ಲಿ ಫೋರ್ಜ್ ಕ್ರಿಯೇಷನ್ಸ್ ಇದೇ ಮಾರ್ಚ್ನಲ್ಲಿ ಕೇವಲ 2 ಗಂಟೆಯೊಳಗೆ ಸೇತುವೆಯ ಮೂಲಮಾದರಿ ನಿರ್ವಿುಸಿತ್ತು. ಅದು ಭಾರತದ ಆ ಬಗೆಯ ಮೊದಲ ಸೇತುವೆಯಾಗಿದೆ. ಆ ಸೇತುವೆಯನ್ನು ಕೂಡ ಚರ್ವಿತ ಮೀಡೋಸ್ನಲ್ಲೇ ಜೋಡಿಸಲಾಗಿತ್ತು. ಐಐಟಿ ಹೈದರಾಬಾದ್ನ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಕೆ.ವಿ.ಎಲ್. ಸುಬ್ರಮಣಿಯಂ ಮತ್ತವರ ಸಂಶೋಧನಾ ತಂಡ ಅದರ ಪರಿಕಲ್ಪನೆ ಹಾಗೂ ವಿನ್ಯಾಸ ರೂಪಿಸಿತ್ತು. ಭಾರ ಹೊರುವ ಸಾಮರ್ಥ್ಯದ ಪರೀಕ್ಷೆ ಹಾಗೂ ಬಳಕೆಯ ಮೌಲ್ಯಮಾಪನದ ನಂತರ ಈ ಸೇತುವೆಯನ್ನು ಪಾದಚಾರಿಗಳ ಬಳಕೆಗೆ ಮುಕ್ತಗೊಳಿಸಲಾಗಿದೆ. ಪ್ರಸ್ತಾಪಿತ ಮಂದಿರದ ಸುತ್ತ ಇರುವ ಗಾರ್ಡನ್ಗೆ ಪಾದಚಾರಿಗಳ ಸಂಚಾರಕ್ಕೆ ಅದು ಬಳಕೆಯಾಗಲಿದೆ ಎಂದು ಸಿಂಪ್ಲಿಫೋರ್ಜ್ ಕ್ರಿಯೇಷನ್ಸ್ನ ಸಿಇಒ ಧ್ರುವ ಗಾಂಧಿ ಹೇಳಿದ್ದಾರೆ.
3 ಗರ್ಭಗುಡಿ
ದೇವಸ್ಥಾನದಲ್ಲಿ 3 ಗರ್ಭಗುಡಿ ಇರುತ್ತವೆ. ಗಣಪತಿಗೆ ಸಮರ್ಪಿತವಾದ 'ಮೋದಕ' ಆಕಾರದ ಗರ್ಭಗುಡಿ, ಶಂಕರನಿಗೆ ಚೌಕಾಕಾರ ಮತ್ತು ದೇವಿ ಪಾರ್ವತಿಗೆ ಕಮಲಾಕಾರದ ಗರ್ಭಗುಡಿಗಳು ಮಂದಿರದಲ್ಲಿರುತ್ತವೆ ಎಂದು ಅಪ್ಸುಜಾ ಇನ್ಫ್ರಾಟೆಕ್ನ ಆಡಳಿತ ನಿರ್ದೇಶಕ ಹರಿ ಕೃಷ್ಣ ಜೇಡಪಲ್ಲಿ ತಿಳಿಸಿದ್ದಾರೆ.