ಸಮಯವಿದೆ, ನಂತರ ಮಾಡಬಹುದು ಎಂದುಕೊಂಡು ಎಲ್ಲವನ್ನೂ ಮುಂದೂಡುವ ಅಭ್ಯಾಸ ನಮ್ಮ ಬಹುತೇಕರದ್ದು.
ಅನೇಕ ವಿಷಯಗಳು ತಡವಾಗಿ ಕೊನೆಗೆ ನಮ್ಮಿಂದ ಬಹುದೂರ ಸಾಗಿರುತ್ತದೆ. ಕೆಲವು ನಿರ್ಣಾಯಕ ಹಣಕಾಸಿನ ವಿಷಯಗಳನ್ನು ಪೂರ್ಣಗೊಳಿಸಲು ಜೂನ್ 30 ಕೊನೆಯ ದಿನಾಂಕವಾಗಿದೆ. ಪ್ಯಾನ್-ಆಧಾರ್ ಲಿಂಕ್ ಮಾಡುವುದು, ಇಪಿಎಸ್ ಪಿಂಚಣಿ ಅರ್ಜಿ, ಬ್ಯಾಂಕ್ ಲಾಕರ್ ಒಪ್ಪಂದ ಇತ್ಯಾದಿಗಳನ್ನು ಗಡುವಿನೊಳಗೆ ಮಾಡಬೇಕು. ಇಲ್ಲದಿದ್ದರೆ, ದೊಡ್ಡ ಪರಿಣಾಮಗಳುÉದುರಾಗಬಹುದಾಗಿದೆ. ಬಹಳ ಎಚ್ಚರಿಕೆಯಿಂದ ಮತ್ತು ಮುಂಚಿತವಾಗಿ ಮಾಡಬೇಕಾದ ಕೆಲವು ವಿಷಯಗಳು ಇಲ್ಲಿವೆ.
1) ಬ್ಯಾಂಕ್ ಲಾಕರ್ ಒಪ್ಪಂದದ ನವೀಕರಣ
ಬ್ಯಾಂಕ್‍ಗಳಲ್ಲಿನ ಲಾಕರ್ ಒಪ್ಪಂದಗಳ ನವೀಕರಣದ ಗಡುವು ಜೂನ್ 30 ರಂದು ಕೊನೆಗೊಳ್ಳಲಿದೆ. ಗ್ರಾಹಕರು ನಿಗದಿತ ಸಮಯದ ಚೌಕಟ್ಟಿನೊಳಗೆ ನವೀಕರಿಸಿದ ಲಾಕರ್ ಒಪ್ಪಂದಗಳಿಗೆ ಸಹಿ ಮಾಡಬೇಕು. ಜೂನ್ 30 ರೊಳಗೆ ಶೇಕಡಾ 50 ರಷ್ಟು ಗ್ರಾಹಕರು ಮತ್ತು ಸೆಪ್ಟೆಂಬರ್ 30 ರೊಳಗೆ ಶೇಕಡಾ 75 ರಷ್ಟು ಗ್ರಾಹಕರು ತಮ್ಮ ಒಪ್ಪಂದಗಳನ್ನು ನವೀಕರಿಸುತ್ತಾರೆ ಎಂದು ಬ್ಯಾಂಕ್‍ಗಳು ಖಚಿತಪಡಿಸಿಕೊಳ್ಳಬೇಕು.
2) ಆಧಾರ್-ಪ್ಯಾನ್ ಕಾರ್ಡ್‍ನೊಂದಿಗೆ ಲಿಂಕ್ ಮಾಡುವುದು
ಆಧಾರ್-ಪ್ಯಾನ್ ಕಾರ್ಡ್ ಲಿಂಕ್ ಮಾಡುವುದು ಜೂನ್ 30 ರಂದು ಕೊನೆಗೊಳ್ಳುತ್ತದೆ. ಸಮಯದ ಮಿತಿಯೊಳಗೆ ಲಿಂಕ್ ಆಗದಿದ್ದಲ್ಲಿ ಪ್ಯಾನ್ ಕಾರ್ಡ್ ಅನ್ನು ರದ್ದುಗೊಳಿಸಲಾಗುತ್ತದೆ. ಕಾರ್ಡ್ ನಿಷ್ಕ್ರಿಯಗೊಂಡರೆ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲಾಗುವುದಿಲ್ಲ. ಇದು ಬ್ಯಾಂಕ್ ವಹಿವಾಟು ಸೇರಿದಂತೆ ಹಣಕಾಸು ವಹಿವಾಟಿನ ಮೇಲೂ ಪರಿಣಾಮ ಬೀರಲಿದೆ. ಹಲವು ಬಾರಿ ಗಡುವು ವಿಸ್ತರಣೆಯಾಗಿರುವುದರಿಂದ ಜೂನ್ 30ರ ನಂತರ ಮತ್ತೊಮ್ಮೆ ವಿಸ್ತರಣೆಯಾಗುವ ಸಾಧ್ಯತೆ ತೀರಾ ಕಡಿಮೆ.
3) ಇಪಿಎಸ್ ಪಿಂಚಣಿಗೆ ಅರ್ಜಿ ಸಲ್ಲಿಸುವುದು
ಹೆಚ್ಚಿನ ಇಪಿಎಸ್ ಪಿಂಚಣಿಗೆ ಅರ್ಜಿ ಸಲ್ಲಿಸಲು ಜೂನ್ 26 ಕೊನೆಯ ದಿನಾಂಕವಾಗಿದೆ. ಮೊದಲ ಗಡುವು ಮಾರ್ಚ್ 3 ಆಗಿದೆ. ಇದರ ಮೂಲಕ ಪಿಂಚಣಿಗೆ ಮಾಸಿಕ 15,000 ರೂ.ಗಿಂತ ಹೆಚ್ಚು ಕೊಡುಗೆ ನೀಡಲು ಸಾಧ್ಯ.