HEALTH TIPS

'ಐಐಟಿ ಬಾಂಬೆ'ಗೆ ₹ 315 ಕೋಟಿ ದೇಣಿಗೆ ನೀಡಿದ ನಂದನ್‌ ನಿಲೇಕಣಿ

           ಬೆಂಗಳೂರು: ಇನ್ಫೋಸಿಸ್ ಸಹ ಸಂಸ್ಥಾಪಕ ಹಾಗೂ ತಂತ್ರಜ್ಞಾನ ಪರಿಣತ ನಂದನ್‌ ನಿಲೇಕಣಿ ಅವರು ತಾವು ಎಂಜಿನಿಯರಿಂಗ್‌ ಪದವಿ ಪಡೆದ 'ಐಐಟಿ ಬಾಂಬೆ'ಗೆ ₹ 315 ಕೋಟಿ ಉದಾರ ದೇಣಿಗೆ ನೀಡಿದ್ದಾರೆ.

                 ಈ ಬಗ್ಗೆ ಟ್ವೀಟ್‌ ಮಾಡಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ.


                ಈ ಸಂಸ್ಥೆ ನನಗೆ ಹೆಚ್ಚಿನದನ್ನು ನೀಡಿದೆ. ಇದರ ಗೌರವಾರ್ಥದ ನೆರವು ಇದಾಗಿದೆ. ನಾಳೆ ನಮ್ಮ ಜಗತ್ತನ್ನು ರೂಪಿಸುವ ವಿದ್ಯಾರ್ಥಿಗಳೆಡೆಗಿನ ಬದ್ಧತೆಯಾಗಿದೆ ಎಂದು ನಂದನ್‌ ನಿಲೇಕಣಿ ಟ್ವೀಟ್‌ ಮಾಡಿದ್ದಾರೆ.

           ವಿಶ್ವ ದರ್ಜೆಯ ಮೂಲಸೌಕರ್ಯ, ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಂಶೋಧನೆ ಉತ್ತೇಜಿಸಲು ಹಾಗೂ ಈ ಕ್ಯಾಂಪಸ್‌ ಅಲ್ಲಿ ಟೆಕ್ ಸ್ಟಾರ್ಟ್‌ಅಪ್ ಪರಿಸರ ವ್ಯವಸ್ಥೆ ಪೋಷಿಸಲು ಈ ದೇಣಿಗೆ ನೀಡಿರುವುದಾಗಿ ನಂದನ್‌ ನಿಲೇಕಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಭಾರತದಲ್ಲಿ ಹಳೆಯ ವಿದ್ಯಾರ್ಥಿಯೊಬ್ಬರು ನೀಡಿದ ಅತಿದೊಡ್ಡ ದೇಣಿಗೆ ಇದಾಗಿದೆ ಎಂದು ಐಐಟಿ ಬಾಂಬೆ ಹೇಳಿದೆ.

           ಈ ಹಿಂದೆ ನಂದನ್‌ ನಿಲೇಕಣಿ ಅವರು ಐಐಟಿ ಬಾಂಬೆಗೆ ₹ 85 ಕೋಟಿ ದೇಣಿ ನೀಡಿದ್ದರು. ಅವರು ಐಐಟಿ ಬಾಂಬೆಗೆ ಒಟ್ಟು ₹400 ಕೋಟಿ ದೇಣಿ ನೀಡಿದಂತಾಗಿದೆ.

               1973ರಲ್ಲಿ ಐಐಟಿ ಬಾಂಬೆಗೆ ಸೇರಿದ್ದ ನಿಲೇಕಣಿ ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌ ಪದವಿ ಪಡೆದಿದ್ದರು. ಐಐಟಿ ಬಾಂಬೆ 1958ರಲ್ಲಿ ಸ್ಥಾಪನೆಯಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries