ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿಯನ್ನು ರದ್ದುಪಡಿಸಿದಾಗಿನಿಂದ ಸರ್ವತೋಮುಖ ಅಭಿವೃದ್ಧಿಯಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು. ಕಾಶ್ಮೀರದ ಯುವಕರು ಕಲ್ಲುಗಳ ಬದಲಿಗೆ ಪೆನ್ನು ಮತ್ತು ಲ್ಯಾಪ್‌ಟಾಪ್‌ಗಳನ್ನು ಕೊಂಡೊಯ್ಯಬೇಕು ಎಂದು ಶಾ ಪ್ರೇರೆಪಿಸಿದರು.

ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂದಿನ ಸರ್ಕಾರಗಳ ಆಳ್ವಿಕೆಯಲ್ಲಿ, ಪ್ರಜಾಪ್ರಭುತ್ವವು 80 ರಿಂದ 85 ಜನರಿಗೆ ಮಾತ್ರ ಸೀಮಿತವಾಗಿತ್ತು. ಅಬ್ದುಲ್ಲಾ, ಮುಫ್ತಿಗಳು ಮತ್ತು ಗಾಂಧಿಗಳು ಈ ಮೂರು ಕುಟುಂಬಗಳು ಮಾತ್ರ ಪ್ರಜಾಪ್ರಭುತ್ವದ ಮೇಲೆ ಹಿಡಿತ ಸಾಧಿಸಿದ್ದರು. ಆದರೆ ಈಗ ಚುನಾಯಿತ ಪ್ರತಿನಿಧಿಗಳು ಕಾಶ್ಮೀರದ ಭವಿಷ್ಯವನ್ನು ನಿರ್ಧರಿಸುತ್ತಿದ್ದಾರೆ ಎಂದು ಶಾ ಹೇಳಿದರು.
ಕಾಶ್ಮೀರದಲ್ಲಿ ಮೂರು ದಿನಗಳ ವಿತಾಸ್ತಾ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾ, ಚರಿತ್ರೆಯ ಬಗ್ಗೆ ಗೊತ್ತಿದ್ದವರಿಗೆ ಕಳೆದ ನಾಲ್ಕು ದಶಕಗಳಲ್ಲಿ ಜಮ್ಮು ಮತ್ತು ಕಾಶ್ಮೀರ ವಿವಾದಿತ ಹಾಗೂ ಗೊಂದಲದ ಪ್ರವೇಶವಾಗಿತ್ತು. ಆದರೆ ಈಗ ವಿಜಯಶಾಲಿ ಹಾಗೂ ಶಾಂತಿಯುತ ಪ್ರದೇಶವಾಗಿ ಹೊರಹೊಮ್ಮಿದೆ ಎಂದು ಹೇಳಿದರು.
ಯುವಕರನ್ನು ಉದ್ದೇಶಿಸಿ ಮಾತನಾಡಿದ ಶಾ, 'ನಿಮಗೆ ಶಸ್ತ್ರಾಸ್ತ್ರ ಮತ್ತು ಕಲ್ಲುಗಳನ್ನು ಹಸ್ತಾಂತರಿಸಿದವರು ಎಂದಿಗೂ ನಿಮ್ಮ ಹಿತೈಷಿಗಳಲ್ಲ, ನಿಮ್ಮ ಕೈಯಲ್ಲಿ ಪೆನ್ನುಗಳು, ಲ್ಯಾಪ್‌ಟಾಪ್‌ಗಳು ಮತ್ತು ಪುಸ್ತಕಗಳು ಇರಬೇಕೇ ಹೊರತು ಕಲ್ಲುಗಳಲ್ಲ' ಎಂದು ಅವರು ಈ ಹಿಂದೆ ನಡೆದ ಕಲ್ಲು ತೂರಾಟದ ಪ್ರತಿಭಟನೆಗಳನ್ನು ಉಲ್ಲೇಖಿಸಿದರು.
ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ್ದ ಸಂವಿಧಾನದ 370ನೇ ವಿಧಿಯನ್ನು 2019ರಲ್ಲಿ ರದ್ದುಪಡಿಸಿದ ನಂತರ ಸರ್ವತೋಮುಖ ಬೆಳವಣಿಗೆಯನ್ನು ಕಂಡಿದೆ ಎಂದು ಅಮಿತ್ ಶಾ ಹೇಳಿದರು.