ಕಾಸರಗೋಡು : ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರ ಮೂರನೇ ವರ್ಷದ ಚಾತುರ್ಮಾಸ ವ್ರತಾಚರಣೆ ಜುಲೈ 3ರಿಂದ ಶ್ರೀ ಮಠದಲ್ಲಿ ಆರಂಭಗೊಳ್ಳಲಿದೆ. ಸಾಂಸ್ಕøತಿಕ ಕಾರ್ಯಕ್ರಮಗಳ ಉದ್ಘಾಟನೆ ಜುಲೈ 3ರಂದು ಮಧ್ಯಾಹ್ನ 2.30ಕ್ಕೆ ಶ್ರೀ ಮಠದಲ್ಲಿ ಜರುಗಲಿದೆ. ಉದ್ಯಮಿ ಸದಾಶಿವ ಶೆಟ್ಟಿ ಕನ್ಯಾನ ಉದ್ಘಾಟಿಸುವರು. ಲೋಕಸಭಾ ಸದಸ್ಯ ರಾಜ್‍ಮೋಹನ್ ಉಣ್ಣಿತ್ತಾನ್ ಅಧ್ಯಕ್ಷತೆ ವಹಿಸುವರು. ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ. ಮೋಹನ ಆಳ್ವ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಸಂಜೆ 4ರಿಂದ 'ಅಕ್ಷಯಾಂಬರ'ಯಕ್ಷಗಾನ ಬಯಲಾಟ ನಡೆಯುವುದು. ಚಾತುರ್ಮಾಸ ವ್ರತಾಚರಣೆಯ ವಿವಿಧ ದಿನಗಳಲ್ಲಿ ಸಂಸ್ಕøತಿಕ, ಧಾರ್ಮಿಕ, ವೈದಿಕ ಕಾರ್ಯಕ್ರಮ, ಭಜನೆ, ಸತ್ಸಂಗ ಜರುಗಲಿರುವುದು.
ಕೇರಳದ ಏಕೈಕ ಶ್ರೀ ಶಂಕರ ಪರಂಪರೆಯ ಮಠ ಇದಾಗಿದ್ದು, ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರು ತೋಂಟಕಾಚಾರ್ಯ ಯತಿಪರಂಪರೆಯ 20ನೇ ಯತಿ ಶ್ರೇಷ್ಠರಾಗಿದ್ದಾರೆ. ಈ ಬಾರಿ ಅಧಿಕ ಮಾಸದ ಹಿನ್ನೆಲೆಯಲ್ಲಿ 60ದಿವಸಗಳ ಬದಲು 84ದಿವಸಗಳ ವ್ರತಾಚರಣೆ ನಡೆಯಲಿದೆ. ಕೃಷ್ಣೈಕ್ಯ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಅವರ ಉತ್ತರಾಧಿಕಾರಿಯಾಗಿ ಶ್ರೀಮಠದ ಜವಾಬ್ದಾರಿ ವಹಿಸಿಕೊಂಡಿರುವ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮಿಗಳು ಹಿರಿಯ ಶ್ರೀಗಳು ಹಾಕಿಕೊಟ್ಟ ಮಾರ್ಗದಲ್ಲೇ ಮುನ್ನಡೆಯುತ್ತಿದ್ದಾರೆ. ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ತಮ್ಮ ಮೂರನೇ ವರ್ಷದ ಚಾತುರ್ಮಾಸ ವ್ರತಾಚರಣೆಯನ್ವಯ ಧಾರ್ಮಿಕ, ಆಧ್ಯಾತ್ಮಿಕ, ಶೈಕ್ಷಣಿಕದ ಜತೆಗೆ ಯಕ್ಷಗಾನದಂತಹ ಸಾಂಸ್ಕ್ರøತಿಕ ಪರಂಪರೆಯನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ.