ಮಂಜೇಶ್ವರ: ಉದ್ಯಾವರದಲ್ಲಿ ಮನೆಬಾಗಿಲು ಒಡೆದು ನುಗ್ಗಿದ ಕಳ್ಳರು 42.4ಪವನು ಚಿನ್ನ ಹಾಗೂ 1.25ಲಕ್ಷ ರೂ. ನಗದು ಕಳವುಗೈದಿದ್ದಾರೆ. ಉದ್ಯಾವರ ಕೆ.ಜೆ.ಎಂ ರಸ್ತೆಯ ಸಯ್ಯದ್ ಹಮೀದ್ ತಙಳ್ ಎಂಬವರ ಮನೆಯಿಂದ ಈ ಕಳವು ನಡೆದಿದೆ. ತಙಳ್ ಕುಟುಂಬ ಎರಡು ದಿವಸಗಳ ಹಿಂದೆ ಮನೆಗೆ ಬೀಗ ಹಾಕಿ ಏರ್ವಾಡಿಗೆ ತೀರ್ಥಾಟನೆ ಹೋಗಿದ್ದು, ಗುರುವಾರ ಮನೆಗೆ ವಾಪಸಾದಾಗ ಕಳವು ಬೆಳಕಿಗೆ ಬಂದಿದೆ. ಕಳವಾಗಿರುವ ಚಿನ್ನ ಹಾಗೂ ನಗದಿನಲ್ಲಿ ಇವರ ಸ್ನೇಹಿತರೊಬ್ಬರು ಭದ್ರವಾಗಿರಿಸಲು ನೀಡಿದ್ದ 8ಪವನು ಚಿನ್ನ ಹಾಗೂ 50ಸಾವಿರ ರೂ. ನಗದು ಒಳಗೊಂಡಿತ್ತು. ಜೂ. 20ರ ಸಂಜೆ 4.30ರಿಂದ 22ರ ಸಂಜೆ 6.30ರೊಳಗೆ ಕಳವು ನಡೆದಿರಬೇಕೆಂದು ಸಂಶಯಿಸಲಾಗಿದೆ. ಮಂಜೇಶ್ವರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಶ್ವಾನ ಹಾಗೂ ಬೆರಳಚ್ಚು ತಜ್ಞರು ಸ್ಥಳಕ್ಕಾಗಮಿಸಿ ಮಾಹಿತಿ ಸಂಗ್ರಹಿಸಿದ್ದಾರೆ.