HEALTH TIPS

ಅಲ್ಪಸಂಖ್ಯಾತರ ಕಲ್ಯಾಣಕ್ಕೆ ನೀಡಲಾಗಿದ್ದ ₹ 4,500 ಕೋಟಿ ಬಳಕೆ ಮಾಡಿಕೊಳ್ಳದ ರಾಜ್ಯಗಳು

               ವದೆಹಲಿ: ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಇರುವ ‍'ಪ್ರಧಾನಮಂತ್ರಿ ಜನ ವಿಕಾಸ ಕಾರ್ಯಕ್ರಮ' ಯೋಜನೆಯಡಿ ನೀಡಲಾಗಿದ್ದ ₹ 4500 ಕೋಟಿ ರಾಜ್ಯಗಳ ಬಳಿ ಬಳಕೆಯಾಗದೇ ಉಳಿದಿವೆ ಎಂದು ಸೋಮವಾರ ಅಧಿಕಾರಿಗಳು ತಿಳಿಸಿದ್ದಾರೆ.

             2008 ರಿಂದ 2018-19ರ ಅವಧಿಯಲ್ಲಿ ಈ ಯೋಜನೆಯಡಿ ಮೂಲಸೌಕರ್ಯ ಅಭಿವೃದ್ಧಿಗೆ ಬಿಡುಗಡೆಯಾದ 58,000 ಘಟಕಗಳು ಕಾರ್ಯಸಾಧುವಲ್ಲ ಎಂದು ರಾಜ್ಯ ಸರ್ಕಾರಗಳು ಹೇಳಿದ್ದು, ಹೀಗಾಗಿ ಅವುಗಳನ್ನು ಒಂದೋ ಕೈ ಬಿಡಲಾಗಿದೆ ಅಥವಾ ರದ್ದು ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಈ ಯೋಜನೆಯಡಿ ಬಿಡುಗಡೆಯಾಗುವ ಅನುದಾನವನ್ನು ಬಳಕೆ ಮಾಡಿ, ರಾಜ್ಯ ಸರ್ಕಾರಗಳು 'ಬಳಕೆ ಪ್ರಮಾಣಪತ್ರ' ನೀಡದ ಹೊರತು, ಕೇಂದ್ರ ಸರ್ಕಾರಕ್ಕೆ ಈ ಯೋಜನೆಯಡಿ ಹೆಚ್ಚಿನ ಅನುದಾನ ನೀಡಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

                ಅಲ್ಲದೆ, ಯುಪಿಎ ಅವಧಿಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣಕ್ಕೆ ₹ 12,000 ಕೋಟಿ ಹಾಗೂ ಪ್ರಧಾನಿ ಮೋದಿ ಅವರ 9 ವರ್ಷದ ಅವಧಿಯಲ್ಲಿ ₹ 31,000 ಕೋಟಿ ಖರ್ಚು ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

                  ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಇರುವ ಕೇಂದ್ರ ಸರ್ಕಾರದ ಯೋಜನೆ ಇದಾಗಿದ್ದು, ಈ ಯೋಜನೆಯಡಿ ‍ಆಯ್ದ ಪ‍್ರದೇಶಗಳ ಮೂಲಭೂತ ಸೌಕರ್ಯ ಅಭಿವೃದ್ಧಿ ‍ಮಾಡಲಾಗುತ್ತದೆ. 2018ರಲ್ಲಿ ಈ ಯೋಜನೆಗೆ ಹೊಸ ರೂಪ ಕೊಡಲಾಗಿತ್ತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries