ನವದೆಹಲಿ: ಭಾರತದಲ್ಲಿ ಸದ್ಯ ನಿಷೇಧವಾಗಿರುವ ಅಲೈಕ್ಸ್‌ಪ್ರೆಸ್ ಆನ್ಲೈನ್ ಶಾಪಿಂಗ್ ಕಾರಣಕ್ಕೆ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿತ್ತು. ಭಾರತದಲ್ಲಿ ಲಭ್ಯವಿಲ್ಲದ ಕೆಲವು ವಸ್ತುಗಳನ್ನು ಇಲ್ಲಿ ಅಗ್ಗದ ಬೆಲೆಯಲ್ಲಿ ಆರ್ಡರ್ ಮಾಡಬಹುದಾಗಿತ್ತು.
ನವದೆಹಲಿ: ಭಾರತದಲ್ಲಿ ಸದ್ಯ ನಿಷೇಧವಾಗಿರುವ ಅಲೈಕ್ಸ್‌ಪ್ರೆಸ್ ಆನ್ಲೈನ್ ಶಾಪಿಂಗ್ ಕಾರಣಕ್ಕೆ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿತ್ತು. ಭಾರತದಲ್ಲಿ ಲಭ್ಯವಿಲ್ಲದ ಕೆಲವು ವಸ್ತುಗಳನ್ನು ಇಲ್ಲಿ ಅಗ್ಗದ ಬೆಲೆಯಲ್ಲಿ ಆರ್ಡರ್ ಮಾಡಬಹುದಾಗಿತ್ತು.
ದೆಹಲಿ ಮೂಲದ ಟೆಕ್ಕಿಯೊಬ್ಬರು ಅಲೈಕ್ಸ್‌ಪ್ರೆಸ್ ಶಾಪಿಂಗ್ ತಾಣದ ಮೂಲಕ ವಸ್ತುವೊಂದನ್ನು ಆರ್ಡರ್ ಮಾಡಿದ್ದರು. ಆದರೆ ನಿಗದಿತ ದಿನಾಂಕ ಕಳೆದಿದ್ದರೂ, ಆರ್ಡರ್ ಮಾತ್ರ ಕೈಸೇರಿರಲಿಲ್ಲ. ಹೀಗಾಗಿ ಏನೋ ಸಮಸ್ಯೆಯಾಗಿದೆ ಎಂದುಕೊಂಡು, ಟೆಕ್ಕಿ ಸುಮ್ಮನಾಗಿದ್ದರು. ಇದಾಗಿ ಕೆಲ ಸಮಯ ಕಳೆಯುತ್ತಿದ್ದಂತೆ ಭಾರತದಲ್ಲಿ ಅಲೈಕ್ಸ್‌ಪ್ರೆಸ್ ತಾಣ ನಿಷೇಧವಾಗಿದೆ.
ನಿತಿನ್ ಅಗರ್ವಾಲ್ ಅಲಿ ಬಾಬಾ ಒಡೆತನದ ಅಲೈಕ್ಸ್‌ಪ್ರೆಸ್‌ನಿಂದ 2019ರಲ್ಲಿ ವಸ್ತುವೊಂದನ್ನು ಆರ್ಡರ್ ಮಾಡಿದ್ದು, ಇದೀಗ ನಾಲ್ಕು ವರ್ಷಗಳ ವಸ್ತು ಕೈಸೇರಿದೆ. ಈ ಬಗ್ಗೆ ಟ್ಚೀಟ್ ಮಾಡಿ ತಿಳಿಸಿದ್ದಾರೆ. ಜತೆಗೆ ತಡವಾಗಿ ಆರ್ಡರ್ ಕೈಸೇರಿರುವು ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ್ದು, 'ಎಂದಿಗೂ ಭರವಸೆ ಕಳೆದುಕೊಳ್ಳದಿರಿ' ಎಂದು ಕ್ಯಾಪ್ಶನ್ ನೀಡಿದ್ದಾರೆ.
ನಿತಿನ್ ಅಗರ್ವಾಲ್ ಅಲೈಕ್ಸ್ಪ್ರೆಸ್ನ್ನು ಭಾರತದಲ್ಲಿ ನಿಷೇಧಿಸುವ ಮೊದಲು ಶಾಪಿಂಗ್ ಮಾಡಿದ್ದರು. ಭದ್ರತಾ ಕಾರಣಕ್ಕಾಗಿ ಭಾರತ ಸರ್ಕಾರವು 2020ರಲ್ಲಿ 58 ಚೀನೀ ಆಯಪ್ಗಳನ್ನು ನಿಷೇಧಿಸಿತ್ತು. ಅವುಗಳಲ್ಲಿ ಅಲೈಕ್ಸ್‌ಪ್ರೆಸ್ ಕೂಡಾ ಒಂದಾಗಿದೆ. ನಿತಿನ್ ಮಾಡಿರುವ ಟ್ವೀಟ್ ವೈರಲ್ ಆಗುತ್ತಿದ್ದು, ಸಾಕಷ್ಟು ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.