ಕೋಝಿಕ್ಕೋಡ್: ಸಾರ್ವಜನಿಕ ಆಸ್ತಿ-ಪಾಸ್ತಿ ಧ್ವಂಸ ಪ್ರಕರಣದಲ್ಲಿ ಲೋಕೋಪಯೋಗಿ ಸಚಿವ ಪಿಎ ಮುಹಮ್ಮದ್ ರಿಯಾಝ್ ದಂಡ ಪಾವತಿಸಿದ್ದಾರೆ. ಮಹಮ್ಮದ್ ರಿಯಾಝ್ ವಡಕರ ನ್ಯಾಯಾಲಯದಲ್ಲಿ 3,80,000 ರೂ.ದಂಡ ಪಾವತಿಸಲು ಸೂಚಿಸಲಾಗಿತ್ತು.
ವಡಕರ ಪ್ರಧಾನ ಅಂಚೆ ಕಚೇರಿಗೆ ಡಿವೈಎಫ್‍ಐ ನಡೆಸಿದ ಮೆರವಣಿಗೆಯ ನಂತರದ ಪ್ರಕರಣದಲ್ಲಿ ನ್ಯಾಯಾಲಯ ತೀರ್ಪು ನೀಡಿದೆ. ರಿಯಾಜ್ ಸೇರಿ 12 ಮಂದಿ ವಿರುದ್ದ ಪ್ರಕರಣ ದಾಖಲಾಗಿತ್ತು.
ಇದೀಗ ಮುಹಮ್ಮದ್ ರಿಯಾಜ್ ನ್ಯಾಯಾಲಯಕ್ಕೆ 40 ಸಾವಿರ ರೂಪಾಯಿ ಪಾವತಿಸಬೇಕಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಕೇಂದ್ರ ಸ್ಥಾಯಿ ಪರಿಷತ್ ಸದಸ್ಯ ಅಡ್ವ. ಎಂ.ರಾಜೇಶ್ ಕುಮಾರ್ ಉಪಸ್ಥಿತರಿದ್ದರು.