ನವದೆಹಲಿ: ಒಟ್ಟು 89,047 ಕೋಟಿ ರೂ.ಗಳ ಬಿಎಸ್ಎನ್ಎಲ್ ನ ಮೂರನೇ ಪುನರುಜ್ಜೀವನ ಪ್ಯಾಕೇಜ್‌ಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.
ಈ ಪ್ಯಾಕೇಜ್ ಈಕ್ವಿಟಿ ಇನ್ಫ್ಯೂಷನ್ ಮೂಲಕ BSNL ಗೆ 4G ಮತ್ತು 5G ಸ್ಪೆಕ್ಟ್ರಮ್ ಹಂಚಿಕೆಯನ್ನು ಒಳಗೊಂಡಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
"ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, BSNL ಗೆ ಒಟ್ಟು 89,047 ಕೋಟಿ ರೂಪಾಯಿಗಳ ಮೂರನೇ ಪುನರುಜ್ಜೀವನ ಪ್ಯಾಕೇಜ್ ಅನುಮತಿ ನೀಡಿದೆ" ಎಂದು ಪ್ರಕಟಣೆ ಹೇಳಿದೆ.
ಅಲ್ಲದೆ, BSNL ನ ಅಧಿಕೃತ ಬಂಡವಾಳವನ್ನು 1,50,000 ಕೋಟಿಯಿಂದ 2,10,000 ಕೋಟಿಗೆ ಹೆಚ್ಚಿಸಲಾಗುವುದು. ಈ ಪ್ಯಾಕೇಜ್ 46,338.6 ಕೋಟಿ ಮೌಲ್ಯದ ಪ್ರೀಮಿಯಂ ವೈರ್‌ಲೆಸ್ ಆವರ್ತನಗಳ 700 MHz ಬ್ಯಾಂಡ್ ಸ್ಪೆಕ್ಟ್ರಮ್ ಹಂಚಿಕೆಯನ್ನು ಒಳಗೊಂಡಿದೆ.