ಜೈಪುರ: ಮಹಿಳೆಯೊಬ್ಬರು ತಮ್ಮ 58ನೇ ವಯಸ್ಸಿನಲ್ಲಿ ಅವಳಿ ಮಕ್ಕಳ ತಾಯಿಯಾಗಿದ್ದಾರೆ. ಬಿಕಾನೇರ್‌ನ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯೊಂದರಲ್ಲಿ ಅವಳಿ ಗಂಡು-ಹೆಣ್ಣು ಮಕ್ಕಳಿಗೆ ಜನ್ಮ ನೀಡಿರುವ ಅಚ್ಚರಿಯ ಘಟನೆ ನಡೆದಿದೆ. ಹೆರಿಗೆಯ ನಂತರ ತಾಯಿ ಮತ್ತು ಮಕ್ಕಳು ಸಂಪೂರ್ಣವಾಗಿ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ವರದಿ ಪ್ರಕಾರ 58 ವರ್ಷದ ಶೇರಾ ಬಹದ್ದೂರ್ ಅವರಿಗೆ ಮಕ್ಕಳಿರಲಿಲ್ಲ. ಕೊನೆಗೆ ಐವಿಎಫ್ ತಂತ್ರದ ಮೊರೆ ಹೋಗಿದ್ದರು. ಎರಡು ವರ್ಷಗಳ ಬಳಿಕ ಗರ್ಭಿಣಿಯಾಗಿದ್ದಾರೆ. ವೃದ್ಧಾಪ್ಯದಲ್ಲೂ ಮಕ್ಕಳನ್ನು ಹೊಂದಬೇಕೆಂಬ ಅವರ ಬಯಕೆ ಎಲ್ಲರನ್ನು ಅಚ್ಚರಿಗೊಳಿಸಿದೆ. ಇಷ್ಟು ವರ್ಷಗಳ ನಂತರ ಕುಟುಂಬದಲ್ಲಿ ಒಂದಲ್ಲ ಎರಡಲ್ಲ ಮಗು ಜನಿಸಿರುವುದು, ಇಡೀ ಮನೆಯಲ್ಲಿ ಸಂತಸ ತಂದಿದೆ.
58 ವರ್ಷದ ಶೇರಾ ಬಹದ್ದೂರ್ ಅವರಿಗೆ ಬಿಕಾನೇರ್‌ನ ಆಸ್ಪತ್ರೆಯಲ್ಲಿ ಮೊದಲು ವೈದ್ಯಕೀಯ ತಪಾಸಣೆ ನಡೆಸಲಾಯಿತು. ಬಳಿಕ ಹಾರ್ಮೋನುಗಳನ್ನು ಸರಿಪಡಿಸಲು ಒಂದು ವರ್ಷದ ಚಿಕಿತ್ಸೆ ನೀಡಲಾಗಿದೆ. ನಂತರ ಐವಿಎಫ್ ಪ್ರಕ್ರಿಯೆ ಪ್ರಾರಂಭಿಸಲಾಯಿತು. ಇದು ಯಶಸ್ವಿಯಾಗಿದ್ದು, ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಐವಿಎಫ್ ಸಹಾಯದಿಂದ 50 ವರ್ಷ ವಯಸ್ಸಿನಲ್ಲೂ ತಾಯಿಯಾಗಲು ಯಾವುದೇ ತೊಂದರೆ ಇಲ್ಲ. ಆದರೆ ಶೇರಾ ಅವರ ವಯಸ್ಸು ಮತ್ತು ಇಚ್ಛಾಶಕ್ತಿ ಎಲ್ಲರಿಗೂ ಅಚ್ಚರಿ ತಂದಿದೆ ಎಂದು ಡಾ. ಶೆಫಾಲಿ ದಧಿಚ್ ಶೇರಾ ತಿಳಿಸಿದ್ದಾರೆ.