ತಿರುವನಂತಪುರ: ಮೊದಲ ಎರಡು ಹಂಚಿಕೆಗಳಲ್ಲಿ ಸೀಟು ಲಭಿಸಿದ ವಿದ್ಯಾರ್ಥಿಗಳಿಗೆ ತರಗತಿಗಳು ಜು.5 ರಿಂದ ಆರಂಭವಾಗಲಿದೆ ಎಂದು ಶಿಕ್ಷಣ ಇಲಾಖೆ ಸಚಿವ ವಿ. ಶಿವನ್‍ಕುಟ್ಟಿ ತಿಳಿಸಿದ್ದಾರೆ. ಎರಡು ವಾರಗಳಲ್ಲಿ ಪ್ರವೇಶಕ್ಕೆ ಸಂಬಂಧಿಸಿದ ಎಲ್ಲ ಆತಂಕಗಳನ್ನು ಪರಿಹರಿಸಲಾಗುವುದು ಎಂದು ಸಚಿವರು ಹೇಳಿದರು.
ಈ ವರ್ಷದ ಪ್ಲಸ್ ಒನ್ ಸುಧಾರಣಾ ಪರೀಕ್ಷೆಯನ್ನು ಮಾರ್ಚ್‍ಗೆ ಮುನ್ನ ನಡೆಸಲು ಭಾನುವಾರ ನಡೆದ ಉನ್ನತ ಶಿಕ್ಷಣ ಸಮಿತಿ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಈ ವರ್ಷದ ಪ್ಲಸ್ ಟು ವಾರ್ಷಿಕ ಪರೀಕ್ಷೆಯೊಂದಿಗೆ ಮಾರ್ಚ್‍ನಲ್ಲಿ ಪ್ಲಸ್ ಒನ್ ಸುಧಾರಣಾ ಪರೀಕ್ಷೆಯನ್ನು ನಡೆಸುವುದು ಹಿಂದಿನ ನಿರ್ಧಾರವಾಗಿತ್ತು. ಟೀಕೆಗಳ ಕಾರಣ ಬದಲಾವಣೆ ಮಾಡಲಾಗಿದೆ. ಪ್ಲಸ್ ಒನ್ ಸುಧಾರಣಾ ಪರೀಕ್ಷೆಯನ್ನು ಸಾಮಾನ್ಯವಾಗಿ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ನಡೆಸಲಾಗುತ್ತಿತ್ತು. ಬದಲಾವಣೆ ಕುರಿತು ಹೈಯರ್ ಸೆಕೆಂಡರಿ ಇಲಾಖೆ ಶೀಘ್ರದಲ್ಲೇ ಅಧಿಸೂಚನೆ ಹೊರಡಿಸಲಿದೆ.
ಇದೇ ವೇಳೆ ಸರ್ಕಾರಿ ಶಿಕ್ಷಕರು ಖಾಸಗಿ ಟ್ಯೂಷನ್ ತೆಗೆದುಕೊಳ್ಳುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ವಿಜಿಲೆನ್ಸ್ ತಪಾಸಣೆ ಕೂಡ ನಡೆಸಲಾಗುವುದು ಎಂದು ಸಚಿವ ಶಿವನಕುಟ್ಟಿ ತಿಳಿಸಿದರು.