ಭುವನೇಶ್ವರ: ಒಡಿಶಾದಲ್ಲಿ ಕಳೆದ ಶುಕ್ರವಾರ ನಡೆದಿದ್ದ ಭೀಕರ ತ್ರಿವಳಿ ರೈಲು ದುರಂತದ ಘಟನಾ ಸ್ಥಳದ ಸನಿಹವೇ ಮತ್ತೊಂದು ರೈಲು ದುರಂತ ಇಂದು ಸಂಭವಿಸಿದೆ.
ಭುವನೇಶ್ವರ: ಒಡಿಶಾದಲ್ಲಿ ಕಳೆದ ಶುಕ್ರವಾರ ನಡೆದಿದ್ದ ಭೀಕರ ತ್ರಿವಳಿ ರೈಲು ದುರಂತದ ಘಟನಾ ಸ್ಥಳದ ಸನಿಹವೇ ಮತ್ತೊಂದು ರೈಲು ದುರಂತ ಇಂದು ಸಂಭವಿಸಿದೆ.
ಸರಕು ಸಾಗಣೆ ರೈಲೊಂದು ಹರಿದು 6 ಕಾರ್ಮಿಕರು ಮೃತಪಟ್ಟು ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬುಧವಾರ ಮಧ್ಯಾಹ್ನ ಒಡಿಶಾದ ಜಾಜ್‌ಪುರ್ ಜಿಲ್ಲೆಯ ಜಾಜ್‌ಪುರ್ ಕಿಯೋಂಜಾರ್ ರಸ್ತೆ ರೈಲು ನಿಲ್ದಾಣದ ಬಳಿ ನಡೆದಿದೆ.
ದಿಢೀರ್‌ನೇ ಗುಡುಗು-ಮಿಂಚು ಸಹಿತ ಮಳೆ ಪ್ರಾರಂಭವಾಗಿದ್ದರಿಂದ ಅಲ್ಲೇ ಕೆಲಸ ಮಾಡುತ್ತಿದ್ದ ಕಾರ್ಮಿಕರು ಆಶ್ರಯ ಪಡೆಯಲು ಸರಕು ಸಾಗಣೆ ರೈಲಿನ ಕೆಳಗೆ ನಿಂತಿದ್ದರು. ಈ ವೇಳೆ ರೈಲು ಚಲಿಸಿದ್ದರಿಂದ ಕೆಳಗೆ ಸಿಲುಕಿ 6 ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳಕ್ಕೆ ಆ ಭಾಗದ ಹಿರಿಯ ರೈಲ್ವೆ ಅಧಿಕಾರಿಗಳು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. ಮೃತ ಕಾರ್ಮಿಕರು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
ಬಾಲೇಶ್ವರ ರೈಲು ದುರಂತದಲ್ಲಿ ಕನಿಷ್ಠ 288 ಜನ ಮೃತಪಟ್ಟು ಸಾವಿರಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.