ಜಮ್ಮು: ಜುಲೈ1 ರಂದು ಆರಂಭವಾಗುವ ಅಮರನಾಥ ತೀರ್ಥಯಾತ್ರೆಗೆ ಕೈಗೊಂಡಿರುವ ಸಿದ್ದತೆ ಹಾಗೂ ಭದ್ರತಾ ವ್ಯವಸ್ಥೆಯನ್ನು ಜಮ್ಮು ಮತ್ತು ಕಾಶ್ಮೀರದ ಆಡಳಿತದ ಹಿರಿಯ ಅಧಿಕಾರಿಗಳು ಪರೀಶಿಲಿಸಿದ್ದಾರೆ.
ಜಮ್ಮು: ಜುಲೈ1 ರಂದು ಆರಂಭವಾಗುವ ಅಮರನಾಥ ತೀರ್ಥಯಾತ್ರೆಗೆ ಕೈಗೊಂಡಿರುವ ಸಿದ್ದತೆ ಹಾಗೂ ಭದ್ರತಾ ವ್ಯವಸ್ಥೆಯನ್ನು ಜಮ್ಮು ಮತ್ತು ಕಾಶ್ಮೀರದ ಆಡಳಿತದ ಹಿರಿಯ ಅಧಿಕಾರಿಗಳು ಪರೀಶಿಲಿಸಿದ್ದಾರೆ.
ಕೇಂದ್ರಾಡಳಿತ ಪ್ರದೇಶ ಅನಂತನಾಗ ಜಿಲ್ಲೆಯಲ್ಲಿರುವ ಅಮರನಾಥ ದೇವಾಲಯವು 3,880 ಮೀಟರ್ ಎತ್ತರದ ಗುಹೆ ಮೇಲೆ ಸ್ಥಾಪಿತವಾಗಿದೆ.
ಜಮ್ಮು ಡೆಪ್ಯುಟಿ ಕಮಿಷನರ್ ಅವ್ನಿ ಲವಾಸಾ ಹಾಗೂ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು, ಯಾತ್ರಿ ನಿವಾಸ್, ಜಮ್ಮು ರೈಲು ನಿಲ್ದಾಣ, ವೈಷ್ಣವಿ ಧಾಮ್, ಸರಸ್ವತಿ ಧಾಮ್ ಮತ್ತು ಪಂಚಾಯತ್ ಭವನಕ್ಕೆ ಭೇಟಿ ನೀಡಿ ಪರೀಶಿಲಿಸಿದರು.
ಮೂಲ ಸೌಕರ್ಯಗಳ ಕೊರತೆಯಿಂದಾಗಿ ಯಾತ್ರಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವಂತೆ ಲವಾಸಾ ಅವರು ಸಂಬಂಧಪಟ್ಟ ಇಲಾಖೆಗಳಿಗೆ ಸೂಚಿಸಿದರು.
ಕಳೆದ ವರ್ಷ 3.45 ಲಕ್ಷ ಜನರು ಅಮರನಾಥ ಯಾತ್ರೆಯನ್ನು ಕೈಗೊಂಡಿದ್ದರು. ಈ ವರ್ಷ ಯಾತ್ರಾರ್ಥಿಗಳ ಸಂಖ್ಯೆ 5 ಲಕ್ಷಕ್ಕೆ ಏರಬಹುದು.