ನವದೆಹಲಿ: ತೀವ್ರ ನಿರ್ಜಲೀಕರಣವನ್ನು ತಡೆದುಕೊಳ್ಳುವ ಸಾಮರ್ಥ್ಯದಿಂದಾಗಿ ನೀರಿನ ಅವಶ್ಯಕತೆ ಇಲ್ಲದೆ ಬದುಕಬಲ್ಲ 62 ಹೊಸ ಜಾತಿಯ ಸಸ್ಯಗಳನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ.
ಹೊಸದಾಗಿ ಪತ್ತೆಯಾದ ಸಸ್ಯಗಳು ಕೃಷಿಯಲ್ಲಿ, ವಿಶೇಷವಾಗಿ ನೀರಿನ ಕೊರತೆಯಿರುವ ಪ್ರದೇಶಗಳಲ್ಲಿಯೂ ಸಮೃದ್ಧವಾಗಿ ಬೆಳೆಯಬಹುದು ಎಂದು ಸಂಶೋ'ಕರು ತಿಳಿಸಿದ್ದಾರೆ.
ಈ ಸಸ್ಯಗಳು ಬರಗಾಲದಲ್ಲಿಯೂ ಬದುಕಬಲ್ಲವು ಎಂದು ಸಂಶೋಧನೆಯಲ್ಲಿ ಪತ್ತೆಯಾಗಿವೆ. ವಿಶೇಷವಾಗಿ ಈ ಸಸ್ಯಗಳು ನೀರಿನ ಲಭ್ಯತೆ ಇಲ್ಲದೆ ಇದ್ದಾಗ ಸಂಪೂರ್ಣ ಕಾರ್ಯಚಟುವಟಿಕೆ ಸ್ಥಗಿತಗೊಳಿಸುತ್ತವೆ. ಯಾವಾಗ ನೀರು ಲ'್ಯವಾಗುತ್ತದೆಯೋ ಆಗ ಮತ್ತೆ ಬೆಳೆಯಲು ಆರಂಭಿಸುತ್ತವೆ. ಆದ್ದರಿಂದ ಬರಪೀಡಿತ ಪ್ರದೇಶಗಳಲ್ಲಿ ಕೃಷಿಗೆ ಪೂರಕವಾಗಿ ಈ ಸಸ್ಯಗಳನ್ನು ಬೆಳೆಸಬಹುದು.
ಪರಿಸರಕ್ಕೆ ಮಹತ್ವದ ಕೊಡುಗೆ
ಇಂತಹ ಸಸ್ಯಗಳ ಕುರಿತ ಅ'್ಯಯನ ಈವರೆಗೆ ದೇಶದಲ್ಲಿ ಬಹಳ ಕಡಿಮೆ ನಡೆದಿತ್ತು. ಸಾಮಾನ್ಯವಾಗಿ ಪಶ್ಚಿಮಘಟ್ಟಗಳ ಬಂಡೆಗಳ ನಡುವೆ ಸಸ್ಯಗಳು ಬೆಳೆಯುವುದು ವಿಶೇಷವಲ್ಲ. ಆದರೆ ಹೀಗೆ ನೀರಿಲ್ಲದೆ ಬದುಕುವ ಸಸ್ಯಗಳ ಬಗ್ಗೆ ಸಂಶೋ'ನೆ ಆಗಿರಲಿಲ್ಲ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಹೇಳಿದೆ. ಈ ಶೋ' ಜೀವವೈವಿ'್ಯ ಮತ್ತು ಪರಿಸರಕ್ಕೆ ಬಹಳ ಮಹತ್ವ ಕೊಡುಗೆ ನೀಡಿದೆ ಎಂದು ಸಚಿವಾಲಯ ಹೇಳಿದೆ.
ಪತ್ತೆ ಮಾಡಿದ್ದು ಯಾರು?
ಪುಣೆಯ ಅಘರ್ಕರ್ ಸಂಶೋಧನಾ ಸಂಸ್ಥೆಯ (ARI) ಸಂಶೋಧಕರ ತಂಡವು ಈ ಸಸ್ಯಗಳನ್ನು ಪತ್ತೆಮಾಡಿದೆ. ಹೊಸತಾಗಿ ಪತ್ತೆಯಾಗಿರುವ 62 ಸಸ್ಯಗಳ ಪೈಕಿ 16 ಸಸ್ಯಗಳು ಭಾರತದ ಅಲ್ಲಲ್ಲಿ ಕಂಡುಬರುತ್ತವೆ. ಇನ್ನು 12 ಪಶ್ಚಿಮಘಟ್ಟದಲ್ಲಿ ಮಾತ್ರ ಕಂಡುಬಂದಿವೆ.