ನವದೆಹಲಿ: ಸರ್ಕಾರದ ಹಣವನ್ನು ವಂಚಿಸಿದ ಆರೋಪದಡಿ ಮಧ್ಯಪ್ರದೇಶದ ಜಬಲ್‌ಪುರದ ಸಬ್ ಪೋಸ್ಟ್‌ಮಾಸ್ಟರ್ ವಿರುದ್ಧ ಸಿಬಿಐ ಎಫ್‌ಐಆರ್ ದಾಖಲಿಸಿದೆ.
ನವದೆಹಲಿ: ಸರ್ಕಾರದ ಹಣವನ್ನು ವಂಚಿಸಿದ ಆರೋಪದಡಿ ಮಧ್ಯಪ್ರದೇಶದ ಜಬಲ್‌ಪುರದ ಸಬ್ ಪೋಸ್ಟ್‌ಮಾಸ್ಟರ್ ವಿರುದ್ಧ ಸಿಬಿಐ ಎಫ್‌ಐಆರ್ ದಾಖಲಿಸಿದೆ.
ಮೋತಿನಾಳ ಪೋಸ್ಟ್ ಆಫೀಸ್‌ನಲ್ಲಿ ಸಬ್ ಪೋಸ್ಟ್‌ಮಾಸ್ಟರ್ ಆಗಿ ನೇಮಕಗೊಂಡಿದ್ದ ಬಲ್ವಾನ್ ಶಾ ಭಾಲವಿ, ಸರ್ಕಾರ ₹ 65 ಲಕ್ಷ ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.
ಅಂಚೆ ಕಚೇರಿಯಲ್ಲಿ ಆರೋಪಿಯು ನಕಲಿ ಸಹಿಗಳನ್ನು ಬಳಸಿ, 181 ಉಳಿತಾಯ ಬ್ಯಾಂಕ್ ಖಾತೆದಾರರಿಂದ ಹಣ ದುರುಪಯೋಗ ಪಡಿಸಿಕೊಂಡಿದ್ದಾನೆ. 2020 ಮತ್ತು 2022ರ ನಡುವೆ ಈ ವಂಚನೆಯ ಚಟುವಟಿಕೆ ನಡೆದಿದೆ ಎಂದು ಅಧಿಕಾರಿ ಹೇಳಿದ್ದಾರೆ.
ದೂರಿನ ಆಧಾರದ ಮೇಲೆ ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ನಡಿ ಪ್ರಕರಣ ದಾಖಲಿಸಲಾಗಿದೆ ಎಂದೂ ಮಾಹಿತಿ ನೀಡಿದ್ದಾರೆ.