ಕೊಚ್ಚಿ: ರಾಜ್ಯದಲ್ಲಿ ಇದೇ 7ರಿಂದ ನಡೆಯಬೇಕಿದ್ದ ಖಾಸಗಿ ಬಸ್ ಮುಷ್ಕರವನ್ನು ಮುಂದೂಡಲಾಗಿದೆ. ಪರ್ಮಿಟ್ ವಿಚಾರ ಹೈಕೋರ್ಟ್ ಪರಿಗಣನೆಯಲ್ಲಿದ್ದು, ಈ ತಿಂಗಳ 15ರ ನಂತರವμÉ್ಟೀ ವಿದ್ಯಾರ್ಥಿಗಳ ರಿಯಾಯ್ತಿ ಕುರಿತು ವರದಿ ಬರಲಿದ್ದು, ಮುಷ್ಕರವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ.
ಮುಖ್ಯಮಂತ್ರಿ ವಿದೇಶದಿಂದ ಮರಳಿದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಬಸ್ ಮಾಲೀಕರು ಮಾಹಿತಿ ನೀಡಿದ್ದಾರೆ. ಖಾಸಗಿ ಬಸ್‍ಗಳ ಪರ್ಮಿಟ್ ನವೀಕರಿಸಿ ಮತ್ತು ವಿದ್ಯಾರ್ಥಿಗಳ ಪ್ರಯಾಣ ದರವನ್ನು ಕನಿಷ್ಠ 5 ರೂ. ಗೆ ಹೆಚ್ಚಿಸಬೇಕು. ರಿಯಾಯಿತಿ ವಯೋಮಿತಿ ನಿಗದಿ ಮುಂತಾದ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮುಷ್ಕರ ನಡೆಸಲು ಉದ್ದೇಶಿಸಲಾಗಿತ್ತು.