HEALTH TIPS

ಏಪ್ರಿಲ್‌‌ನಲ್ಲಿ ಸುಮಾರು 74 ಲಕ್ಷ ಭಾರತೀಯ ವಾಟ್ಸಾಪ್ ಖಾತೆಗಳು ಬ್ಯಾನ್!

            ನವದೆಹಲಿ: ಮೆಟಾ ಮಾಲೀಕತ್ವದ ವಾಟ್ಸಾಪ್ ಏಪ್ರಿಲ್ ತಿಂಗಳಿನಲ್ಲಿ ದಾಖಲೆಯ  74 ಲಕ್ಷ ಭಾರತೀಯ ಖಾತೆಗಳನ್ನು ನಿಷೇಧಿಸಿದೆ.  ಐಟಿ ನಿಯಮ 2021ರ ನಿಬಂಧನೆಗಳ ಪ್ರಕಾರ ಪ್ರಕಟಿಸಲಾದ ಮಾಸಿಕ ವರದಿಯಲ್ಲಿ ಈ ವಿವರವನ್ನು ಒದಗಿಸಲಾಗಿದೆ.

                ಈ ವರದಿಯು ಏಪ್ರಿಲ್ 1 ರಿಂದ ಏಪ್ರಿಲ್ 30 ಅವಧಿಯನ್ನು ಒಳಗೊಂಡಿದೆ. ಭಾರತದಲ್ಲಿನ ಬಳಕೆದಾರರಿಂದ ಪಡೆದ ದೂರುಗಳು, ಕಾನೂನುಗಳು ಅಥವಾ ಸೇವಾ ನಿಯಮ ಉಲ್ಲಂಘನೆಗಾಗಿ ತೆಗೆದುಕೊಂಡ ಕ್ರಮಗಳು  ಮತ್ತು ದೂರುಗಳ ಮೇಲ್ಮನವಿ ಸಮಿತಿಯಿಂದ ಸ್ವೀಕರಿಸಿದ ಆದೇಶಗಳನ್ನು ಈ ವರದಿ ವಿವರಿಸುತ್ತದೆ. 

               "ಐಟಿ ನಿಯಮಗಳು 2021 ರ ಅನುಸಾರವಾಗಿ ಏಪ್ರಿಲ್ ತಿಂಗಳ ಮಾಸಿಕ ವರದಿಯನ್ನು ಪ್ರಕಟಿಸಿದ್ದೇವೆ. ಈ ಬಳಕೆದಾರರ ಸುರಕ್ಷತಾ ವರದಿಯು ಬಳಕೆದಾರರ ದೂರುಗಳು ಮತ್ತು ತೆಗೆದುಕೊಂಡ ಕ್ರಮಗಳನ್ನು  ಒಳಗೊಂಡಿದ್ದು, ಏಪ್ರಿಲ್ ಸುಮಾರು 7.4 ಮಿಲಿಯನ್ ಖಾತೆಗಳನ್ನು ನಿಷೇಧಿಸಲಾಗಿದೆ ಎಂದು ವಾಟ್ಸಾಪ್ ವಕ್ತಾರರು ತಿಳಿಸಿದ್ದಾರೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries