ಮುಳ್ಳೇರಿಯ: ಮುಳಿಯಾರು ಪಂಚಾಯತಿ ಪೂರ್ವ ಕಾಲದ ಪ್ರಾಥಮಿಕ ವಿದ್ಯಾಲಯವಾದ ಕೋಟೂರು ಎ. ಎಲ್. ಪಿ. ಶಾಲೆಯ 75 ನೇ ವಾರ್ಷಿಕೋತ್ಸವವನ್ನು ವಿಜೃಂಭಣೆಯಿಂದ ನೆರವೇರಿಸಲು ಆಚರಣಾ ಸಮಿತಿಯ ರೂಪೀಕರಣ ಸಭೆ ಶಾಲೆಯಲ್ಲಿ ಜರಗಿತು.
ಮುಳಿಯಾರು ಗ್ರಾಮ ಪಂಚಾಯತಿ ಅಧ್ಯಕ್ಷೆ ಮಿನಿ ಪಿ.ವಿ. ಸಭೆ ಉದ್ಘಾಟಿಸಿದರು. ಶಿವಶಂಕರನ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಶಾಲಾ ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ಗೋಪಾಲನ್ ಮಣಿಯಾಣಿ, ನ್ಯಾಯವಾದಿ ಪಿ. ನಾರಾಯಣನ್, ಕೇಳು ಮಾಸ್ತರ್, ಮುಳಿಯಾರು ಗ್ರಾಮ ಪಂಚಾಯತಿ ಉಪಾಧ್ಯಕ್ಷ ಜನಾರ್ಧನನ್, ಸದಸ್ಯೆ ಎ. ಶ್ಯಾಮಲಾ, ಪಿ. ರವೀಂದ್ರನ್, ಅನನ್ಯ ಎ., ನಾರಾಯಣಿ ಕುಟ್ಟಿ, ಶಾಲಾಭಿವೃದ್ದಿಯ ಸಮಿತಿಯ ಪಿ. ಬಾಲಕೃಷ್ಣನ್, ಅನಿಲ್, ಮಾತೃಸಮಿತಿ ಅಧ್ಯಕ್ಷೆ ಸಂಧ್ಯಾ ಕೆ, ಗೋವಿಂದ ಬಳ್ಳಮೂಲೆ ಉಪಸ್ಥಿತರಿದ್ದು ಶುಭಹಾರೈಸಿದರು.
ಸಭೆಯಲ್ಲಿ ನೂರ ಒಂದು ಸದಸ್ಯರ ಆಚರಣಾ ಸಮಿತಿಯನ್ನು ರೂಪೀಕರಿಸಲಾಯಿತು. ಮುಖ್ಯೋಪಾಧ್ಯಾಯಿನಿ ಸುಕುಮಾರಿ ಕೆ ಎಂ. ಸ್ವಾಗತಿಸಿ, ಹಿರಿಯ ಶಿಕ್ಷಕಿ ಚೋಮಿ ಕುರಿಯಕೋಸ್ ವಂದಿಸಿದರು.