ಕಾಸರಗೋಡು: ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ (ಪಿಎಂಜಿಎಸ್‍ವೈ) 3 ನೇ ಹಂತದಡಿಯಲ್ಲಿ ಪ್ರಸ್ತಾಪ ಸಲ್ಲಿಸಲಾದ ಪಟ್ಟಿಯಿಂದ ಮೊದಲ ಬ್ಯಾಚ್ ಅನ್ವಯ ಆದ್ಯತೆಯ ಆಧಾರದಲ್ಲಿ 2023-24ನೇ ಸಾಲಿನಲ್ಲಿ ಏಳು ಅಭಿವೃದ್ಧಿ ಬ್ಲಾಕ್‍ಗಳಲ್ಲಾಗಿ ಒಟ್ಟು 68.74ಕಿ.ಮೀ ರಸ್ತೆ ಅಭಿವೃದ್ಧಿಗಾಗಿ 62.65ಕೋಟಿ ರೂ. ಮಂಜೂರುಗೊಳಿಸಲಾಗಿದೆ.
ಹೊಸದುರ್ಗ ಬ್ಲಾಕ್‍ನ ಚಾಯೋತ್-ಕಾಞÂರಪೋಯಿಲ್ ರಸ್ತೆ(4ಕಿ.ಮೀ)ಗೆ 3.81 ಕೋಟಿ, ಕಾರಡ್ಕ ಬ್ಲಾಕ್‍ನ ಮುನಾಂಬ್-ಕಲ್ಲಾಳಿ-ಪೆರ್ಲಡ್ಕ-ಆಯಂಕಡವು ರಸ್ತೆ(4.2ಕಿ.ಮೀ)ಗೆ 3.53ಕೋಟಿ, ಪೈಕ-ನೀರೊಳಿಪಾರ-ಮುಳ್ಳೇರಿಯ ರಸ್ತೆ(3ಕಿ.ಮೀ)ಗೆ 2.65ಕೋಟಿ ಮೀಸಲಿರಿಸಲಾಗಿದೆ.
ಕಾಸರಗೋಡು ಬ್ಲಾಕ್‍ನ ಅದಿರ್ಕುಳಿ-ನೆಲ್ಲಿಕಟ್ಟೆ-ಪೊಟ್ಟಿಪಲ-ಎಡನೀರು ರಸ್ತೆ(4.3 ಕಿಮೀ)ಗೆ 3.35 ಕೋಟಿ, ಮಂಜೇಶ್ವರಂ ಬ್ಲಾಕ್‍ನ ಮಣಿಯಂಪಾರೆ-ದೇರಡ್ಕ-ಶಿರಿಯ ಅಣೆಕಟ್ಟು-ಕುರಡ್ಕ ರಸ್ತೆ(9.6ಕಿ.ಮೀ)ಗೆ 7.61ಕೋಟಿ ರೂ. ಮೀಸಲಿಸಿಲಾಗಿದೆ.
ನೀಲೇಶ್ವರಂ ಬ್ಲಾಕ್‍ನ ಚೆರುವತ್ತೂರು-ವಲಿಯಾಪೆÇಯಿಲ್-ನೆಡುಂಬಾ ರಸ್ತೆ(5.83 ಕಿಮೀ)ಗೆ 5.04 ಕೋಟಿ ರೂ, ಪರಪ್ಪ ಬ್ಲಾಕ್‍ನ ಕಾರಕ್ಕೋಡ್-ಪರಕ್ಲಾಯಿ ರಸ್ತೆ(6.9 ಕಿಮೀ)ಗೆ 5.52 ಕೋಟಿ ರೂ. ಮಂಜೂರುಗೊಳಿಸಿದೆ.
ಕಾಸರಗೋಡು ಲೋಕಸಭಾ ಕ್ಷೇತ್ರ ಒಟ್ಟು 11 ರಸ್ತೆಗಳ 68.74 ಕಿ.ಮೀ ರಸ್ತೆ ಅಭಿವೃದ್ಧೀಗೆ 62.65 ಕೋಟಿ ಮಂಜೂರಾಗಿ ಲಭಿಸಿದೆ. ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿರುವ ರಸ್ತೆಗಳ ಕಾಂಗಾರಿ ತಕ್ಷಣ ಪೂರ್ಣಗೊಳಿಸಬೇಕು. ಹೊಸದಾಗಿ ಮಂಜೂರಾಗಿರುವ ರಸ್ತೆಗಳ ಇತರ ಪ್ರಕ್ರಿಯೆಗಳನ್ನು ತ್ವರಿತಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.