ಪೆರ್ಲ : ಮಣಿಯಂಪಾರೆ - ದೇರಡ್ಕ - ಶಿರಿಯ ಅಣೆಕಟ್ಟು- ಕುರೆಡ್ಕ ರಸ್ತೆ ಅಭಿವೃದ್ಧಿಯನ್ನು ಕೇಂದ್ರ ಗ್ರಾಮ ಸಡಕ್ ಯೋಜನೆಗೊಳಪಡಿಸಿ 7.61 ಕೋಟಿ ರೂ ವೆಚ್ಚದ ನಿರ್ಮಾಣ ಕಾಮಗಾರಿಯ ಮಂಜೂರಾತಿಗೆ ಆಡಳಿತಾನುಮತಿ ಲಭಿಸಿರುವುದಾಗಿ ಕಾಸರಗೋಡು ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ತಿಳಿಸಿದ್ದಾರೆ. ಫೇಸ್ 3 ಪ್ರಥಮ ಹಂತದಲ್ಲಿಯೇ ನಿರ್ದೇಶಿತ ಎಲ್ಲಾ ಮಾನದಂಡಗಳನ್ನು ಪಾಲಿಸಿಕೊಂಡು ಪ್ರತ್ಯೇಕ ಪರಿಗಣನೆಗೆ ಅರ್ಹವಾದ ಈ ರಸ್ತೆಯೊಂದಿಗೆ ಜಿಲ್ಲೆಯ 11 ರಸ್ತೆಗಳಿಗೆ 2023-24ರ ಯೋಜನೆಯಂತೆ ಕಾಮಗಾರಿಗೆ ಆಡಳಿತಾನುಮತಿ ಲಭಿಸಿರುವುದಾಗಿ ಸಂಸದರು ತಿಳಿಸಿದರು.
ಎಣ್ಮಕಜೆ - ಪುತ್ತಿಗೆ ಗ್ರಾಮ ಪಂಚಾಯತುಗಳನ್ನು ಸಂಪರ್ಕಗೊಳಿಸುವ ಈ ರಸ್ತೆ ಅಭಿವೃದ್ಧಿಗೆ ಎಣ್ಮಕಜೆ ಗ್ರಾಮ ಪಂಚಾಯತು ಬೇಡಿಕೆ ಸಲ್ಲಿಸಿದ್ದು ಇದನ್ನು ಸಕಾಲದಲ್ಲಿ ಪರಿಗಣಿಸಿದ ಹಾಗೂ ಸಂಸದರ ವಿಶೇಷ ಯೋಜನೆಯಾದ ಆದರ್ಶ ಸಂಸತ್ ಯೋಜನೆಯ ಮೂಲಕ ಎಣ್ಮಕಜೆ ಗ್ರಾಮ ಪಂಚಾಯತಿನಲ್ಲಿ ವಿವಿಧ ಯೋಜನೆಗೆ ರೂಪುರೇμÉ ನೀಡುತ್ತಿರುವ ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಅವರನ್ನು ಎಣ್ಮಕಜೆ ಗ್ರಾಮ ಪಂಚಾಯತು ಅಧ್ಯಕ್ಷ ಸೋಮಶೇಖರ್ ಜೆ.ಎಸ್.ಅಭಿನಂದಿಸಿದ್ದಾರೆ. ಇದಲ್ಲದೆ ಮಂಜೇಶ್ವರ ಬ್ಲೋಕಿಗೊಳಪಟ್ಟ ಮೀಯಪದವು - ದೈಗೋಳಿ- ಪೆÇಯ್ಯತ್ತಬೈಲ್ - ನಂದಾರಪದವು ರಸ್ತೆಗೆ (6.05 ಕೋಟಿ) ಹಾಗೂ ಕಣ್ಣೂರು - ಕಾಸರಗೋಡು ಜಿಲ್ಲೆಯಲ್ಲಿ ಈ ಸಂಸದರ ವ್ಯಾಪ್ತಿಗೊಳಪಡುವ 7 ಬ್ಲೋಕಿಗೊಳಪಟ್ಟು 8 ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಆಡಳಿತಾನುಮತಿಗೆ ಸೇರಿಸಲ್ಪಟ್ಟಿದೆ ಎಂದು ಸಂಸದ ಉಣ್ಣಿತ್ತಾನ್ ಸ್ಪಷ್ಟಪಡಿಸಿದರು.