ನವದೆಹಲಿ:ಭಾರತದಲ್ಲಿ ತಯಾರಾಗಿರುವ ಕನಿಷ್ಠ ಏಳು ಕೆಮ್ಮು ಸಿರಪ್ ಗಳು ವಿಷಕಾರಿಯಾಗಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಬೆಟ್ಟು ಮಾಡಿದೆ. 300ಕ್ಕೂ ಅಧಿಕ ಸಾವಿಗೆ ಕಾರಣವಾಗಿವೆ ಎಂದು ಭಾವಿಸಲಾಗಿರುವ ಔಷಧಿಗಳ ಬಗ್ಗೆ ನಡೆಸಲಾದ ತನಿಖೆಯಲ್ಲಿ ಅದು ಈ ನಿರ್ಣಯಕ್ಕೆ ಬಂದಿದೆ.

ಭಾರತ ಮತ್ತು ಇಂಡೋನೇಶ್ಯಗಳ 15 ಕಂಪೆನಿಗಳು ತಯಾರಿಸಿರುವ 20 ಔಷಧಿಗಳನ್ನು ವಿಷಕಾರಿ ಎಂಬುದಾಗಿ ಗುರುತಿಸಲಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವಕ್ತಾರ ಕ್ರಿಶ್ಚಿಯನ್ ಲಿಂಡ್ಮೆಯರ್ ಹೇಳಿದ್ದಾರೆ. ಈ 20 ಔಷಧಿಗಳಲ್ಲಿ ಕೆಮ್ಮು ಸಿರಪ್ ಗಳು, ಪ್ಯಾರಾಸಿಟಮಾಲ್ ಮತ್ತು ವಿಟಮಿನ್ ಗಳು ಸೇರಿವೆ. ಇದರಲ್ಲಿ ಸಿರಪ್ ಗಳ ಸಂಖ್ಯೆ 15 ಆಗಿದೆ. ಈ ಪೈಕಿ ಏಳು ಸಿರಪ್ ಗಳನ್ನು ಹರ್ಯಾಣದ ಮೇಡನ್ ಫಾರ್ಮಾಸ್ಯೂಟಿಕಲ್ಸ್, ನೋಯ್ಡಾದ ಮರಿಯೊನ್ ಬಯೋಟೆಕ್ ಮತ್ತು ಪಂಜಾಬ್ ನ ಕ್ಯೂಪಿ ಫಾರ್ಮಾಕೆಮ್ ಕಂಪೆನಿಗಳು ತಯಾರಿಸಿವೆ.
ವಿಷಯುಕ್ತ ಕೆಮ್ಮು ಸಿರಪ್ ಗಳಿಂದ ಉದ್ಭವಿಸಿರುವ ಜಾಗತಿಕ ಬೆದರಿಕೆ ಬಗ್ಗೆ ತಾನು ತನಿಖೆ ನಡೆಸುತ್ತಿರುವುದಾಗಿ ಕಳೆದ ವಾರ ವಿಶ್ವ ಆರೋಗ್ಯ ಸಂಸ್ಥೆ ಹೇಳಿತ್ತು.
ಮೇಡನ್ ಫಾರ್ಮಾಸ್ಯೂಟಿಕಲ್ಸ್ ತಯಾರಿಸಿದ ಕೆಮ್ಮು ಸಿರಪ್ ಗಳನ್ನು ಸೇವಿಸಿ ಪಶ್ಚಿಮ ಆಫ್ರಿಕಾದ ದೇಶ ಗಾಂಬಿಯದಲ್ಲಿ 66 ಮಂದಿ ಮೃತಪಟ್ಟಿದ್ದಾರೆ ಎಂದು ಕಳೆದ ವರ್ಷದ ಅಕ್ಟೋಬರ್ ನಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿತ್ತು.
ಬಳಿಕ ಡಿಸೆಂಬರ್ ನಲ್ಲಿ, ಭಾರತದ ಮರಿಯೊನ್ ಬಯೋಟೆಕ್ ತಯಾರಿಸಿದ ಕೆಮ್ಮು ಸಿರಪ್ ಸೇವಿಸಿ ಉಝ್ಬೆಕಿಸ್ತಾನದಲ್ಲಿ 18 ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ ಎಂಬುದಾಗಿಯೂ WHO ಹೇಳಿತ್ತು.
ಎಪ್ರಿಲ್ ನಲ್ಲಿ, ಇನ್ನೊಂದು ಭಾರತೀಯ ಔಷಧ ತಯಾರಿಕಾ ಸಂಸ್ಥೆಯು ವಿಷಯುಕ್ತ ಕೆಮ್ಮು ಸಿರಪ್ ಗಳನ್ನು ಮಾರ್ಶಲ್ ಐಲ್ಯಾಂಡ್ಸ್ ಮತ್ತು ಮೈಕ್ರೋನೇಶ್ಯಕ್ಕೆ ರಫ್ತು ಮಾಡಿದೆ ಎಂದು ಅದು ಹೇಳಿತ್ತು.