ಮಲಪ್ಪುರಂ: ಯುವಕನೊಬ್ಬ ಕಾಲ್ನಡಿಗೆಯೊಂದಿಗೆ ಪ್ರಸಿದ್ಧ ಹಜ್ ಯಾತ್ರೆ ಪೂರ್ಣಗೊಳಿಸಿದ್ದಾನೆ. ಹೌದು, ಮಲಪ್ಪುರಂ ಜಿಲ್ಲೆಯ ಶಿಹಾಬ್ ಚೋಟ್ಟೂರ್ ಎಂಬಾತ ಕೇರಳದಿಂದ ನಡೆದುಕೊಂಡು ಹೋಗಿ ಮೆಕ್ಕಾಗೆ ಭೇಟಿ ನೀಡಿದ್ದು, ಇದಕ್ಕಾಗಿ ಒಂದು ವರ್ಷಗಳ ಕಾಲ (370 ದಿನಗಳು) ಸಮಯ ತೆಗೆದುಕೊಂಡಿದ್ದಾನೆ.

ಶಿಹಾಬ್ ಚೋಟ್ಟೂರ್ ಜೂನ್ 2, 2022 ರಂದು ಕಾಲ್ನಡಿಗೆಯೊಂದಿಗೆ ಹಜ್ ಯಾತ್ರೆ ಆರಂಭಿಸಿ ಮೆಕ್ಕಾ ತಲುಪಿದ್ದಾನೆ. ಒಟ್ಟು 8,640 ಕಿ.ಮೀ ದೂರದ ಕಾಲ್ನಡಿಗೆಯ ಪ್ರಯಾಣವು ಕೇರಳದಿಂದ ಆರಂಭಗೊಂಡು ಪಾಕಿಸ್ತಾನ, ಇರಾನ್, ಇರಾಕ್, ಕುವೈತ್ ಮತ್ತು ಅಂತಿಮವಾಗಿ ಸೌದಿ ಅರೇಬಿಯಾ ಮೂಲಕ ಪೂರ್ಣಗೊಂಡಿದೆ.
ಸೌದಿ ಅರೇಬಿಯಾ ತಲುಪಿದ ಬಳಿಕ ಶಿಹಾಬ್ ಪ್ರಮುಖ ಇಸ್ಲಾಮಿಕ್ ಯಾತ್ರಾ ಸ್ಥಳವಾದ ಮದೀನಾಕ್ಕೆ ಮೊದಲು ಭೇಟಿ ನೀಡಿದ್ದಾನೆ. ಅಲ್ಲಿ 21 ದಿನ ಕಳೆದು, ಮೆಕ್ಕಾದತ್ತ ಮತ್ತೆ ಕಾಲ್ನಡಿಗೆ ಆರಂಭಿಸಿದ್ದಾನೆ. ಮದೀನಾ ಮತ್ತು ಮೆಕ್ಕಾ ನಡುವಿನ 440 ಕಿ.ಮೀ ದೂರವನ್ನು ಕೇವಲ ಒಂಬತ್ತು ದಿನಗಳಲ್ಲಿ ಕ್ರಮಿಸಿದ್ದಾನೆ. ಇದೀಗ ಈತನ ಸಾಧನೆಯನ್ನು ಎಲ್ಲರೂ ಕೊಂಡಾಡುತ್ತಿದ್ದಾರೆ.
ವಾಘ ಗಡಿಯ ಮೂಲಕ ಪಾಕಿಸ್ತಾನ ಪ್ರವೇಶ
ಕಳೆದ ವರ್ಷ ಜೂನ್‌ನಲ್ಲಿ ಹಜ್ ಪ್ರಯಾಣ ಆರಂಭಿಸಿದ ಶಿಹಾಬ್, ವಾಘಾ ಗಡಿಯ ಮೂಲಕ ಪಾಕಿಸ್ತಾನ ಪ್ರವೇಶ ಪಡೆದುಕೊಂಡಿದ್ದಾನೆ. ವೀಸಾ ಹೊಂದಿಲ್ಲದ ಕಾರಣ ಪಾಕಿಸ್ತಾನದ ಅಧಿಕಾರಿಗಳು ಪಾಕ್ ಪ್ರವೇಶಕ್ಕೆ ನಿರಾಕರಿಸಿದ್ದರು. ಬಳಿಕ ಟ್ರಾನ್ಸಿಟ್ ವೀಸಾ ಪಡೆದುಕೊಳ್ಳಲು ಸಾಕಷ್ಟು ಸಮಯ ತಗುಲಿದೆ. ಈ ವೇಳೆ ವಾಘಾದ ಶಾಲೆಯೊಂದರಲ್ಲಿ ಶಿಹಾಬ್ ಸುಮಾರು ಒಂದು ತಿಂಗಳ ಕಾಲ ತಂಗಿದ್ದ. ಅಂತಿಮವಾಗಿ, ಫೆಬ್ರವರಿ 2023ರಲ್ಲಿ ಟ್ರಾನ್ಸಿಟ್ ವೀಸಾ ಪಡೆದುಕೊಂಡು ಪಾಕಿಸ್ತಾನ ಪ್ರವೇಶಿಸಿದ್ದಾನೆ.