ನವದೆಹಲಿ: 2023ರಲ್ಲಿ ಫೆಬ್ರವರಿಯಲ್ಲಿ ಬ್ರಿಟಿಷ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್ (ಬಿಬಿಸಿ) ಕಚೇರಿಗಳಲ್ಲಿ ಆದಾಯ ತೆರಿಗೆ ಸಮೀಕ್ಷೆ ನಡೆಸಿತ್ತು. ಇದೀಗ ಬಿಬಿಸಿ ತೆರಿಗೆ ವಂಚನೆ ಮಾಡಿರುವುದನ್ನು ಒಪ್ಪಿಕೊಂಡಿದೆ ಎಂದು ವರದಿಯಾಗಿದೆ.
ಆದಾಯ ತೆರಿಗೆಯ ಈ ದಾಳಿಯನ್ನು ವಿಪಕ್ಷಗಳು 'ತುರ್ತು ಪರಿಸ್ಥಿತಿ' ಎಂದು ಕರೆದಿದ್ದವು. ಮೋದಿ ಸರ್ಕಾರ ಪ್ರತೀಕಾರದ ಕ್ರಮ ಎಂದು ಆರೋಪಿಸಿದರು. ಆದರೆ ಇದೀಗ ಬಿಬಿಸಿ ಕಡಿಮೆ ಆದಾಯ ತೋರಿಸಿರುವುದನ್ನು ಒಪ್ಪಿಕೊಂಡಿರುವುದು ವಿಪಕ್ಷಗಳಿಗೆ ಮುಖಭಂಗ ತಂದಿದೆ.
India.com ವರದಿಯ ಪ್ರಕಾರ, ಬಿಬಿಸಿ 2016 ಮತ್ತು 2022ರ ನಡುವೆ ಕಡಿಮೆ ತೆರಿಗೆ ಪಾವತಿಸಿದ್ದನ್ನು ಒಪ್ಪಿಕೊಂಡಿದೆ. ಇದನ್ನು ಸರಿದೂಗಿಸಲು ಸುಮಾರು 40 ಕೋಟಿ ಠೇವಣಿ ಇಢಲು ಆದಾಯ ತೆರಿಗೆ ಇಲಾಖೆಗೆ ಅರ್ಜಿ ಸಲ್ಲಿಸಿದ್ದಾರೆ. ವರದಿ ಪ್ರಕಾರ ಇಲಾಖೆಯ ಮೌಲ್ಯಮಾಪನ ಇನ್ನಷ್ಟೇ ಬರಬೇಕಿದೆ. ಆದರೆ ಪ್ರಕರಣವನ್ನು ತಪ್ಪಿಸಲು, ಬಿಬಿಸಿ ಈ ಅರ್ಜಿಯನ್ನು ಸಲ್ಲಿಸಿದೆ ಎನ್ನಲಾಗಿದೆ.
BBC ಬಾಕಿ ಇರುವ ಆದಾಯ ತೆರಿಗೆಯನ್ನು ತೆರವುಗೊಳಿಸಲು ಅಥವಾ ಅದಕ್ಕಾಗಿ ಯಾವುದೇ ಲಿಖಿತ ಅರ್ಜಿಯನ್ನು ನೀಡಿಲ್ಲ ಎಂದು ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮವೊಂದು ವರದಿ ಮಾಡಿದೆ.
ಫೆಬ್ರವರಿ 14ರಂದು, ಆದಾಯ ತೆರಿಗೆ ಇಲಾಖೆ ದೆಹಲಿ ಮತ್ತು ಮುಂಬೈನಲ್ಲಿರುವ ಬಿಬಿಸಿ ಕಚೇರಿಗಳ ಮೇಲೆ ದಾಳಿ ನಡೆಸಿ 3 ದಿನಗಳ ಕಾಲ ಸಮೀಕ್ಷೆ ನಡೆಸಿತ್ತು. 2023ರ 16 ಫೆಬ್ರವರಿ ಸಮೀಕ್ಷೆಯನ್ನು ಪೂರ್ಣಗೊಳಿಸಿದ ನಂತರ, ಆದಾಯ ತೆರಿಗೆ ಇಲಾಖೆಯು BBC ಅನ್ನು ಹೆಸರಿಸದೆ, ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 133A ಅಡಿಯಲ್ಲಿ ದೆಹಲಿ ಮತ್ತು ಮುಂಬೈನಲ್ಲಿರುವ ಪ್ರಮುಖ ಅಂತರರಾಷ್ಟ್ರೀಯ ಮಾಧ್ಯಮ ಕಂಪನಿಯ ಕಚೇರಿಗಳನ್ನು ಸಮೀಕ್ಷೆ ಮಾಡಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿತ್ತು.